Friday, April 4, 2025
Google search engine

Homeಸ್ಥಳೀಯದಸರಾ ವೀಕ್ಷಣೆಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್

ದಸರಾ ವೀಕ್ಷಣೆಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮದಿಂದ ಹೆಚ್ಚುವರಿ ಬಸ್

ಮೈಸೂರು : ದಸರಾ ಸಂಭ್ರಮ ಆಚರಣೆಗೆ ಸಾಂಸ್ಕೃತಿಕ ನಗರಿ ಮದುವಣಗಿತ್ತಿಯಂತೆ ಸಜ್ಜಾಗಿದೆ. ಭಾನುವಾರ (ಅ.೧೫) ನಾಡಹಬ್ಬ ದಸರಾ ಆಚರಣೆಗೆ ಚಾಲನೆ ದೊರೆಯಲಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದ್ದು, ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ದಸರಾ ವೀಕ್ಷಣೆಗೆ ಬರುವ ಸಾಧ್ಯತೆ ಇದೆ. ಈ ಹಿನ್ನೆಲಯಲ್ಲಿ ಮೈಸೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕ ಬಸ್‌ಗಳನ್ನು ರಸ್ತೆಗೆ ಇಳಿಸಲು ನಿರ್ಧರಿಸಿದೆ.

ಶಕ್ತಿಯೋಜನೆ ಜಾರಿಯಾದಾಗಿನಿಂದ ಪ್ರತಿದಿನ ಒಟ್ಟು ೩.೭೫ ಲಕ್ಷ ಜನರು ಪ್ರಯಾಣಿಸುತ್ತಿದ್ದಾರೆ. ಈ ಸಂಖ್ಯೆ ಐದು ಲಕ್ಷಕ್ಕೆ ತಲುಪಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ಮತ್ತು ಸಾರ್ವಜನಿಕರ ಮನವಿ ಮೇರೆಗೆ ಮೈಸೂರು ಕೆಎಸ್‌ಆರ್‌ಟಿಸಿ ವಿಭಾಗವು ಅ. ೧೫ ರಿಂದ ತಿಂಗಳಾಂತ್ಯದವರೆಗೆ ಸುಮಾರು ೩೫೦ ಹೆಚ್ಚುವರಿ ಬಸ್‌ಗಳನ್ನು ಬಿಡಲಿದೆ.

ಉಚಿತ ಪ್ರಯಾಣದ ಕಾರಣ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಲಿದೆ. ಸದ್ಯ ಕಾರ್ಯನಿರ್ವಹಿಸುತ್ತಿರುವ ೧,೦೦೦ ಕ್ಕೂ ಹೆಚ್ಚಿನ ಬಸ್‌ಗಳ ಜೊತೆಗೆ, ಜನದಟ್ಟಣೆಯನ್ನು ನಿಯಂತ್ರಿಸಲು ಹೆಚ್ಚುವರಿ ೩೫೦ ಬಸ್‌ಗಳನ್ನು ಓಡಿಸುತ್ತೇವೆ. ಬೇಡಿಕೆ ಹೆಚ್ಚಾದರೆ ಬೇರೆ ಜಿಲ್ಲೆಗಳ ಡಿಪೋಗಳಿಂದ ಬಸ್ಸುಗಳನ್ನು ತರಬೇಕಾಗಬಹುದು. ದಸರಾ ದಟ್ಟಣೆಯನ್ನು ನಿರ್ವಹಿಸಲು ವಿಭಾಗವು ಸಂಪೂರ್ಣ ಸನ್ನದ್ಧವಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಜಿ. ಶ್ರೀನಿವಾಸ್ ಹೇಳಿದರು.

ರಾಜಹಂಸ, ಐರಾವತ ಸೇರಿದಂತೆ ಎಲ್ಲ ರೀತಿಯ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ನೆರೆಯ ಜಿಲ್ಲೆಗಳಿಂದ ಹೆಚ್ಚುವರಿ ಚಾಲಕರು ಮತ್ತು ಕಂಡಕ್ಟರ್‌ಗಳನ್ನು ನಿಯೋಜಿಸಲಾಗುತ್ತಿದೆ. ಶಕ್ತಿ ಯೋಜನೆಯಿಂದಾಗಿ ಜನದಟ್ಟಣೆ ಹೆಚ್ಚಲಿದೆ. ಪ್ರತಿ ವರ್ಷ ದಸರಾ ಸಮಯದಲ್ಲಿ ಮೈಸೂರು ವಿಭಾಗವು ಮಂಡ್ಯ ಮತ್ತು ಚಾಮರಾಜನಗರ ಕೆಎಸ್‌ಆರ್‌ಟಿಸಿ ವಿಭಾಗಗಳ ಸಹಾಯದೊಂದಿಗೆ ಬಸ್‌ಗಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತದೆ.

ಮೈಸೂರು ವಿಭಾಗವು ಬೆಂಗಳೂರಿಗೆ ಮಾತ್ರ ಐಷಾರಾಮಿ ಮತ್ತು ಪ್ರೀಮಿಯಂ ಸೇವೆಗಳನ್ನು ಒಳಗೊಂಡಂತೆ ಸುಮಾರು ೩೦೦ ಟ್ರಿಪ್‌ಗಳನ್ನು ನಡೆಸುತ್ತದೆ. ಮೈಸೂರು ದಸರಾ ವೇಳೆ ಬಸ್ ವೇಳಾಪಟ್ಟಿ ಹೆಚ್ಚಾಗಲಿದೆ. ವಿಭಾಗವು ಒಂಬತ್ತು ಡಿಪೋಗಳನ್ನು ಹೊಂದಿದೆ. ಪ್ರಯಾಣಿಕರ ಹೊರೆಯು ಶೇ೧೦೦ ರಷ್ಟು ದಾಟುವುದರಿಂದ ಇಂಟರ್-ಸಿಟಿ ಸೇವೆಗಳನ್ನು ನಿರ್ವಹಿಸುವುದು ವಿಭಾಗಕ್ಕೆ ಸವಾಲಾಗಿದೆ. ದಸರಾ ಸಂದರ್ಭದಲ್ಲಿ ನಗರ ಬಸ್ ನಿಲ್ದಾಣವು ಚಾಮುಂಡಿ ಬೆಟ್ಟ ಮತ್ತು ಬೃಂದಾವನ ಉದ್ಯಾನವನಗಳಿಗೆ ದಾಖಲೆಯ ದಟ್ಟಣೆಗೆ ಸಾಕ್ಷಿಯಾಗಲಿದೆ. ಪ್ರವಾಸಿ ತಾಣಗಳಿಗೆ ಬಸ್‌ಗಳು ಸಾಮಾನ್ಯವಾಗಿ ತುಂಬಿರುತ್ತವೆ.

RELATED ARTICLES
- Advertisment -
Google search engine

Most Popular