Saturday, April 19, 2025
Google search engine

Homeರಾಜ್ಯಹೊಸ ವರ್ಷಾಚರಣೆಗೆ ರಾತ್ರಿ 2 ಗಂಟೆ ವರೆಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ

ಹೊಸ ವರ್ಷಾಚರಣೆಗೆ ರಾತ್ರಿ 2 ಗಂಟೆ ವರೆಗೆ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ಸೇವೆ

ಬೆಂಗಳೂರು: ಹೊಸ ವರ್ಷವನ್ನು ಸ್ವಾಗತಿಸಲು ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ಶುರುವಾಗಿದೆ. ಎಂಜಿ ರೋಡ್, ಚರ್ಚ್ ಸ್ಟ್ರೀಟ್ ಸೇರಿದಂತೆ ನಗರದ ವಿವಿಧೆಡೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ಹೀಗಾಗಿ ನಮ್ಮ ಮೆಟ್ರೋ ರೈಲು ಸೇವೆ ತಡರಾತ್ರಿ ಎರಡು ಗಂಟೆವರೆಗೂ ವಿಸ್ತರಿಸಲಾಗಿದ್ದು, ಇದೀಗ ಬಿಎಂಟಿಸಿ ಕೂಡ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಮಾಡಿದೆ. ಬೆಂಗಳೂರಿನ ವಿವಿಧ ಭಾಗಗಳಿಂದ ರಾತ್ರಿ ಎರಡು ಗಂಟೆವರೆಗೆ ಹೆಚ್ಚುವರಿ ಬಸ್ಸುಗಳು ಸಂಚಾರ ಮಾಡಲಿವೆ.

ಎಂಜಿ ರಸ್ತೆಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚಿನ ಬಸ್​ ಸೌಲಭ್ಯ ಕಲ್ಪಿಸಲಾಗುತ್ತಿದೆ. 13 ಸ್ಥಳಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿರುವುದಾಗಿ ಬಿಎಂಟಿಸಿ ತಿಳಿಸಿದೆ. ರಾತ್ರಿ 11 ಗಂಟೆಯಿಂದ ರಾತ್ರಿ 2 ಗಂಟೆಯವರೆಗೆ ಹೆಚ್ಚುವರಿ ಬಸ್ ಸೇವೆ ದೊರೆಯಲಿದೆ.

ಎಲ್ಲಿಗೆಲ್ಲ ಹೆಚ್ಚುವರಿ ಬಸ್?

ಎಂ.ಜಿ.ರಸ್ತೆ, ಬ್ರಿಗೇಡ್​ ರಸ್ತೆ, ಎಲೆಕ್ಟ್ರಾನಿಕ್​ ಸಿಟಿ, ಜಿಗಣಿ, ಸರ್ಜಾಪುರ, ಕೆಂಗೇರಿ, ಜನಪ್ರಿಯ ಟೌನ್​ಶಿಪ್, ನೆಲಮಂಗಲ, ಯಲಹಂಕ ಉಪನಗರ 5ನೇ ಹಂತ, ಬಾಗಲೂರು, ಹೊಸಕೋಟೆ, ಚನ್ನಸಂದ್ರ, ಕಾಡುಗೋಡಿ, ಬನಶಂಕರಿಗೆ ಹೆಚ್ಚುವರಿ ಬಸ್​ ವ್ಯವಸ್ಥೆ ಮಾಡಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್​.ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಬನಶಂಕರಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಹೆಬ್ಬಾಳ, ಸೆಂಟ್ರಲ್ ಸಿಲ್ಕ್ ಬೋರ್ಡ್​ನಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಕುಡಿದು ಬಂದ್ ಕಿರಿಕ್ ಮಾಡಿದರೆ ದಂಡ!

ಕುಡಿದು ಬಂದು ಮಹಿಳೆಯರ ಜೊತೆಗೆ ಕಿರಿಕ್ ಮಾಡಿದರೆ, 500 ರುಪಾಯಿ ದಂಡ ವಿಧಿಸುವುದಾಗಿ ಬಿಎಂಆರ್​ಸಿಎಲ್ ತಿಳಿಸಿದೆ. ಮಹಿಳೆಯರಿಗೆ ತೊಂದರೆ ನೀಡಿದರೆ ಅಂಥವರನ್ನು ಪೋಲಿಸ್ ವಶಕ್ಕೆ ನೀಡಲಾಗುವುದು ಎಂದೂ ತಿಳಿಸಿದೆ. 31 ರ ರಾತ್ರಿ ಮಹಿಳೆಯರ ಸುರಕ್ಷತೆಗಾಗಿ ಪ್ರತಿ ಮೆಟ್ರೋ ಕೋಚ್​​ನಲ್ಲೂ ಮಹಿಳಾ ಸೆಕ್ಯುರಿಟಿ ಮತ್ತು ಪ್ಯಾಟ್ರೋಲ್ ಟೀಮ್ ನೇಮಕ ಮಾಡಲಾಗಿದೆ.

ಹೊಸ ವರ್ಷದ ಸಂಭ್ರಮಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ ಮಾಡಲಾಗಿದ್ದು, ತಡರಾತ್ರಿ 2 ಗಂಟೆಗೆ ಎಲ್ಲಾ ಟರ್ಮಿನಲ್​​ನಿಂದ ಕೊನೆಯ ರೈಲು ಹೊರಡಲಿದೆ.

RELATED ARTICLES
- Advertisment -
Google search engine

Most Popular