ತುಮಕೂರು:ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸಚಿವರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ ನಾನು ಶಾಸಕನಾಗಿದ್ದೇನೆ, ಕಾಂಗ್ರೆಸ್ ಹೈಕಮಾಂಡ್ ಅಪೇಕ್ಷೆಯಂತೆ ಮಂತ್ರಿ ಕೂಡ ಆಗಿದ್ದೇನೆ.ಮುಂದೆ ಲೋಕಸಭೆಗೆ ನಿಲ್ಲಬೇಕು ಅಂದ್ರೆ ನಿಲ್ಲೋದಕ್ಕೆ ಸಿದ್ದನಿದ್ದೇನೆ. ಇನ್ನೂ ಯಾವ ರೀತಿಯ ಸೂಚನೆಯೂ ಬಂದಿಲ್ಲ.ದೆಹಲಿ ಸಭೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ೨೮ ಸೀಟ್ ಗೆಲ್ಲಿಸ್ತೀವಿ ಅಂತಾ ಹೇಳಿ ಬಂದಿದ್ದೇವೆ.
ಸಿಎಂ ಸೇರಿದಂತೆ ೩೪ ಸಚಿವರಿಗೂ ಒಂದೊಂದು ಲೋಕಸಭೆ ಕ್ಷೇತ್ರವನ್ನ ಉಸ್ತುವಾರಿ ಕೊಡ್ತಾರೆ.ಚಿಕ್ಕಮಗಳೂರು, ಉಡುಪಿ ಎರಡು ಜಿಲ್ಲೆ ಇದೆ, ಆದರೆ ಒಂದು ಕ್ಷೇತ್ರ ಇದೆ.ಅಲ್ಲಿ ಇಬ್ಬರು ಸಚಿವರಿಗೂ ಒಂದು ಕ್ಷೇತ್ರದ ಜವಾಬ್ದಾರಿ ನೀಡ್ತಾರೆ. ಹಾಸನದಲ್ಲಿ ನನ್ನ ಮುಖಂಡತ್ವದಲ್ಲಿ ನಡೆಯುತ್ತೆ ಅನ್ನೋ ನಂಬಿಕೆ ಇದೆ. ಪಕ್ಷ ಯಾವುದೇ ಮುನ್ಸೂಚನೆ ನೀಡಿದ್ರು ಸೂಚನೆಯಂತೆ ನಡಿತೀವಿ. ಯಾವ ಯಾವ ಸಚಿವರು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ಬೇಕು ಅಂತಾರೋ ಎಲ್ಲರೂ ಸ್ಪರ್ಧೆ ಮಾಡ್ತೀವಿ ಎಂದರು.
ಗುತ್ತಿಗೆದಾರರು ಕಮಿಷನ್ ನೀಡೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ
ಕಾಂಗ್ರೆಸ್ ಸರ್ಕಾರಕ್ಕೆ ಗುತ್ತಿಗೆದಾರರು ಕಮಿಷನ್ ನೀಡೋ ಹೆಚ್ಡಿಕೆ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು
ಅವರು ಸತ್ಯಹರಿಶ್ಚಂದ್ರ ನವರ ಮೊಮ್ಮಕ್ಕಳು. ಅವರೇನು ಹೇಳಿದ್ರು ನಾವ್ ಪ್ರಶ್ನೆ ಮಾಡೋಕೆ ಹೋಗಲ್ಲ. ಅದೆಲ್ಲಾ ಸುಳ್ಳು, ಯಾರೆಲ್ಲಾ ಹೇಳ್ತಾರೆ ಅವರೇ ಅದರಲ್ಲಿ ಎಕ್ಸ್‌ಪರ್ಟ್ ಇರ್ತಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ತಿಂಗಳು ಆಗಿದೆ ಅಷ್ಟೆ. ಏನ್ ಎರಡೂವರೆ ವರ್ಷ ಆಯ್ತಾ..? ಹೊಸ ಸರ್ಕಾರ ಬಂದಾಗ ಅಧಿಕಾರಿಗಳ ಬದಲಾವಣೆ ಸರ್ವೇ ಸಾಮಾನ್ಯ. ನಾಳೆ ಕಾಂಗ್ರೆಸ್ ಸರ್ಕಾರ ಹೋಗಿ ಇನ್ನೊಂದು ಸರ್ಕಾರ ಬರುತ್ತಪ್ಪ, ಆಗ ಹೊಸದಾಗಿ ಶಾಸಕರು ಬಂದಿರ್ತಾರೆ, ನನಗೆ ಬೇಕಾದ ಅಧಿಕಾರಿಗಳು ಹಾಕಿಸಿಕೊಳ್ಳಬೇಕು ಅನ್ನೋ ಅಪೇಕ್ಷೆ ಅವರಿಗೆ ಇರುತ್ತೆ, ಅವರ ಅಪೇಕ್ಷೆ ಇದ್ದಾಗ ಬೇಡ ಅಂತಾ ಹೇಳೋಕೆ ಆಗುತ್ತಾ? ಶಾಸಕರು ಗೆದ್ದು ಬರೋಕೆ ಎಷ್ಟು ಕಷ್ಟ ಇರುತ್ತೆ, ಅವರು ಬಂದು ತಹಶೀಲ್ದಾರನ ಹಾಕೊಡಿ, ಪೊಲೀಸ್ ನ ಹಾಕೊಡಿ ಅಂತಾ ಹೇಳ್ದಾಗ,ಹಾಕಲ್ಲಾ ಅಂತಾ ಹೇಳೋಕೆ ಆಗತ್ತಾ? ಎಂದರು.
ಹಾಲಿನಲ್ಲಿ ಕಲಬೆರಕೆ ವಿಚಾರ..
ಹಾಲು ಕಲಬೆರಕೆ ಮಾಡೋದು, ನನಗೆ ಬಹಳ ತೀವ್ರವಾದ ನೋವು ತಂದಿದೆ. ನಂದಿನಿ ಹಾಲು ಹೊರತಾಗಿ ಬೇರೆ ಹಾಲು ಎಲ್ಲವೂ ಸ್ಲೋ ಪಾಯಿಸನ್ ಆಗಿದೆ. ಈ ಬಗ್ಗೆ ಕಮಿಷನರ್ ಗೆ ಮನವರಿಕೆ ಮಾಡಿಕೊಡಲಾಗಿದೆ. ಸಿಂಥೆಟಿಕ್ ಹಾಲು ಅದು, ಆ ಹಾಲು ಎಷ್ಟು ದಿನ ಇಟ್ಟರೂ ಏನೂ ಆಗಲ್ಲ. ಕಲಬೆರಕೆ ಕುರಿತು ರ‍್ಯಾಂಡಮ್ ಚೆಕ್ ಮಾಡಬೇಕು, ಗುಣಮಟ್ಟದ ಪರೀಕ್ಷೆ ಮಾಡಬೇಕು. ಕಲಬೆರಕೆ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಲು ಉತ್ಪಾದಕ ರೈತರಿಗೆ 3 ರೂ ಹೆಚ್ಚಳ ಮಾಡಲಾಗಿದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಾಗಲಿದೆ.
ಹಾಗಾಗಿ ತುಪ್ಪವೂ ಹೆಚ್ಚಾಗಬಹುದು. ಪ್ರಸ್ತುತ ಸಂದರ್ಭದಲ್ಲಿ ತುಪ್ಪದ ಶೇಖರಣೆ ಕಡಿಮೆ ಇದೆ. ತುಪ್ಪಾ ಹೆಚ್ಚಾದರೆ… ತಿರುಪತಿಗೆ ಬೇಕಾದರೂ ಕೊಡಬಹುದು. ಇಲ್ಲ ಅಂದರೆ ಎಲ್ಲಿಂದ ಕೊಡೋದು. ಕ್ಷೀರ ಭಾಗ್ಯ ಯೋಜನೆ ಅಡಿ ಉತ್ತರ ಕರ್ನಾಟಕದಲ್ಲಿ ಹಾಲಿನ ಪುಡಿ ಪೂರೈಕೆ ಆಗುತ್ತಿಲ್ಲ. ಗುಲ್ಬರ್ಗಾ ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ನಮ್ಮ ನಿರೀಕ್ಷಿಯಂತೆ ಯಶಸ್ವಿಯಾಗಿಲ್ಲ ಎಂದು ತಿಳಿಸಿದರು.