ಮಂಗಳೂರು (ದಕ್ಷಿಣ ಕನ್ನಡ): ಪರಿಶಿಷ್ಟ ಜಾತಿವಾರು ಪಟ್ಟಿಗಳ ಉಪಜಾತಿ ಆದಿ ದ್ರಾವಿಡರಿಗೆ ತುಳು ಭಾಷಿಕರಿಗೆ ಮೀಸಲಾತಿ ವರ್ಗೀ ಕರಣ ಅನುಪಾತದಡಿ ಗರಿಷ್ಠ ಪ್ರಮಾಣದಲ್ಲಿ ಹಂಚಿಕೆ ಮಾಡಿ ಸಹಕರಿಸುವಂತೆ ಹಾಗೂ ನಿಷೇಧಿತ, ನಿಂದನಾತ್ಮಕ, ಬೈಗುಳ ಪದ ಮನ್ಸ ಜಾತಿಯನ್ನು ಜಾತಿವಾರು ಪಟ್ಟಿಯಲ್ಲಿ ಸೇರ್ಪಡೆಗೊಳಿಸದಂತೆ ದ.ಕ. ಜಿಲ್ಲಾ ಆದಿ ದ್ರಾವಿಡ ಸಮಾಜ ಸರಕಾರವನ್ನು ಒತ್ತಾಯಿಸಿದೆ.
ಮಂಗಳೂರು ನಗರದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಮುಖಂಡ ರಾಮಕುಮಾರ್ ಮೀಸಲಾತಿ ಸಂವಿಧಾನದ ಭಾಗವಾಗಿದೆ. ಒಳ ಮಿಸಲಾತಿಯಲ್ಲಿ 101 ಉಪಜಾತಿ ಇದೆ. ಈ ಜಾತಿ, ಉಪಜಾತಿ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದರು.
ದ.ಕ. ಜಿಲ್ಲೆಯ ಮೂಲನಿವಾಸಿಗಳು ಜೀವನೋಪಾಯಕ್ಕಾಗಿ ಚಿಕ್ಕಮಗಳೂರು, ಹಾಸನ ಇನ್ನಿತರ ಸ್ಥಳಗಳಿಗೆ ವಲಸೆ ಹೋಗಿದ್ದು, ಇದೀಗ ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲ ಉಂಟಾಗಿದೆ. ಇದಕ್ಕೆ ಪುರಾವೆಯಾಗಿ ೧೯೦೦ರಲ್ಲಿ ಪುತ್ತೂರಿನ ಮಂಜಲ್ಪಾಡ್ಪುಪ್ರದೇಶದಲ್ಲಿ ಜರ್ಮನಿ ಮಿಷನರಿಯಿಂದ ಆದಿ ದ್ರಾವಿಡ ಅಂಗನವಾಡಿ ಹಾಗೂ ಶಾಲೆಯಿರುವ ಬಗ್ಗೆ ಸುಧಾನ ರೆಸಿಡೆನ್ಸಿ ಸ್ಕೂಲ್ ರೆ. ಫಾ. ವಿಜಯ್ ಹಾರ್ವಿನ್ ಒದಗಿಸಿದ ಸ್ಮರಣ ಸಂಚಿಕೆಯಲ್ಲಿ ಚಿತ್ರಲೇಖನವಿದೆ. ಸ್ವಾತಂತ್ರ್ಯಪೂರ್ವದ 1941ರಲ್ಲಿ ಮೂಡುಬಿದಿರೆಯ ಬಿರ್ಕು ಎಂಬ ಮಹಿಳೆಗೆ ಬ್ರಿಟಿಷ್ ಸರಕಾರವು ಜಾಗದ ಹಕ್ಕು ಪತ್ರ ನೀಡಿದ ದಾಖಲೆ ಇದೆ ಎಂದರು.