Friday, April 18, 2025
Google search engine

Homeರಾಜ್ಯಅದಿರು ನಾಪತ್ತೆ ಕೇಸ್: ಇನ್ನೂ ಹಲವರಿದ್ದಾರೆ, ಅವರಿಗೂ ಶಿಕ್ಷೆ ಆಗಬೇಕು : ನ್ಯಾ.ಸಂತೋಷ್ ಹೆಗ್ಡೆ

ಅದಿರು ನಾಪತ್ತೆ ಕೇಸ್: ಇನ್ನೂ ಹಲವರಿದ್ದಾರೆ, ಅವರಿಗೂ ಶಿಕ್ಷೆ ಆಗಬೇಕು : ನ್ಯಾ.ಸಂತೋಷ್ ಹೆಗ್ಡೆ

ಬೆಂಗಳೂರು : ಬೆಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಗೆ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯವು ಏಳು ವರ್ಷಗಳ ಕಾಲ ಕಠಿಣ ಶಿಕ್ಷೆ ವಿಧಿಸಿದೆ ಈ ವಿಚಾರವಾಗಿ ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗಡೆ ಅವರು ಈ ಒಂದು ಪ್ರಕರಣದಲ್ಲಿ ಇನ್ನೂ ಹಲವರಿದ್ದಾರೆ ಅವರಿಗೂ ಶಿಕ್ಷೆ ಆಗಬೇಕು ಎಂದು ತಿಳಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದು ತೀರ್ಪಿನ ಮುಖಾಂತರ ತಪ್ಪು ಮಾಡಿದವರಿಗೆ ಶಿಕ್ಷೆ ಹಾಗೆ ಆಗುತ್ತದೆ ಎಂದು ತೋರಿಸುತ್ತದೆ. ಅಕ್ರಮ ಅದಿರು ಸಾಗಣೆ ಕೇಸ್ನಲ್ಲಿ ಶಿಕ್ಷೆಯಾಗಿದ್ದು ಉತ್ತಮ ಬೆಳವಣಿಗೆ ಶಿಕ್ಷೆ ಆಗಿರುವುದರಿಂದ ನ್ಯಾಯಾಂಗದ ಶಕ್ತಿ ತೋರಿಸಿ ದಂತಾಗುತ್ತದೆ. ನ್ಯಾಯಾಂಗದ ಮೇಲೆ ಜನರಿಗೆ ವಿಶ್ವಾಸ ಬಂದಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗಡೆ ಪ್ರತಿಕ್ರಿಯೆ ನೀಡಿದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸುವ ಸಂದರ್ಭದಲ್ಲಿ ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆಯ ವೇಳೆ ಅಡೆ-ತಡೆ ಎದುರಾಗಿತ್ತು.ನನ್ನ ಜೊತೆಗೆ ಕೆಲಸ ಮಾಡಿದಾಗ ಅಧಿಕಾರಿಗಳಿಗೆ ಇದೀಗ ಸಂತೃಪ್ತಿ ಸಿಕ್ಕಂತಾಗುತ್ತದೆ ಅಕ್ರಮದಲ್ಲಿ ಇನ್ನೂ ಹಲವರಿದ್ದಾರೆ ಅವರಿಗೂ ಶಿಕ್ಷೆ ಆಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಪ್ರತಿಕ್ರಿಯೆ ನೀಡಿದರು.

RELATED ARTICLES
- Advertisment -
Google search engine

Most Popular