Tuesday, April 15, 2025
Google search engine

Homeಸಿನಿಮಾಹೊಸ ಚಿತ್ರದಲ್ಲಿ ಆದಿತ್ಯ, ರಂಜನಿ ರಾಘವನ್: ಸದ್ದಿಲ್ಲದೇ ನಡೆದಿದೆ ಶೂಟಿಂಗ್​

ಹೊಸ ಚಿತ್ರದಲ್ಲಿ ಆದಿತ್ಯ, ರಂಜನಿ ರಾಘವನ್: ಸದ್ದಿಲ್ಲದೇ ನಡೆದಿದೆ ಶೂಟಿಂಗ್​

ಕನ್ನಡ ಚಿತ್ರರಂಗದಲ್ಲಿ ನಟ ಆದಿತ್ಯ ಅವರು ವಿವಿಧ ರೀತಿಯ ಸಿನಿಮಾಗಳನ್ನು ಮಾಡಿ ಗುರುತಿಸಿಕೊಂಡಿದ್ದಾರೆ. ತಮ್ಮ ಅಭಿನಯದ ಮೂಲಕ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ.

‘ಡೆಡ್ಲಿ ಸೋಮ’, ‘ಎದೆಗಾರಿಕೆ’ ರೀತಿಯ ಚಿತ್ರಗಳಿಂದ ಅವರಿಗೆ ಖ್ಯಾತಿ ಸಿಕ್ಕಿದೆ. ಬೇರೆ ಬೇರೆ ರೀತಿಯ ಪಾತ್ರಗಳನ್ನು ಅವರು ಪ್ರಯತ್ನಿಸುತ್ತಾರೆ. ಈಗ ಆದಿತ್ಯ ನಾಯಕರಾಗಿ ಅಭಿನಯಿಸುತ್ತಿರುವ ಸಿನಿಮಾವೊಂದು ಸದ್ದಿಲ್ಲದೆ ಶುರುವಾಗಿದೆ. ಈ ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿ ಲಭ್ಯವಾಗಿದೆ. ಕನ್ನಡ ಕಿರುತೆರೆಯಲ್ಲಿ ‘ಕನ್ನಡತಿ’ ಸೀರಿಯಲ್​ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ನಟಿ ರಂಜನಿ ರಾಘವನ್​ ಅವರು ಈ ಸಿನಿಮಾದಲ್ಲಿ ಆದಿತ್ಯಗೆ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬುದು ವಿಶೇಷ.

ಆದಿತ್ಯ ಮತ್ತು ರಂಜನಿ ರಾಘವನ್​ ಜೋಡಿಯ ಈ ಸಿನಿಮಾ ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರಲಿದೆ. ಈ ಸಿನಿಮಾಗೆ ಕಿಶೋರ್ ಮೇಗಳಮನೆ ಅವರು ನಿರ್ದೇಶನ ಮಾಡುತ್ತಿದ್ದಾರೆ‌‌. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಕೂಡ ಕಿಶೋರ್ ಮೇಗಳಮನೆ ಅವರೇ ನಿಭಾಯಿಸಿದ್ದಾರೆ. ಇದು ಕಿಶೋರ್ ಅವರು ನಿರ್ದೇಶಿಸುತ್ತಿರುವ ಮೊದಲ ಸಿನಿಮಾ. ಈಗಾಗಲೇ ಈ ಸಿನಿಮಾಗೆ ಚಿತ್ರೀಕರಣ ಆರಂಭ ಆಗಿದೆ. ಚಿಕ್ಕಮಗಳೂರು ಹಾಗೂ ಬೆಂಗಳೂರು ಸುತ್ತಮುತ್ತ 17 ದಿನಗಳ ಕಾಲ ಶೂಟಿಂಗ್​ ನಡೆಸಲಾಗಿದೆ.

ಈ ಸಿನಿಮಾದಲ್ಲಿ ಆದಿತ್ಯ ಅವರು ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕೌತುಕ ಮೂಡಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಫ್ಯಾಕ್ಟರಿ ಮಾಲೀಕರಾದ ಚನ್ನಕೇಶವ ಬಿ.ಸಿ. ನರಸಿಂಹಮೂರ್ತಿ ಚಕ್ರಭಾವಿ, ಸ್ವಾಮಿ ಚಕ್ರಭಾವಿ, ರಮೇಶ್ ಬಂಡೆ, ರವಿ ಕೀಲರ ಮಂಡ್ಯ ಮತ್ತು ರಾಮಚಂದ್ರಯ್ಯ ಕೆ.ಜಿ ಅವರು ಈ ಸಿನಿಮಾವನ್ನು ನಿರ್ಮಾಣ‌ ಮಾಡುತ್ತಿದ್ದಾರೆ. ಸಿಂಗರ್ ಆಗಿ ಖ್ಯಾತಿ ಪಡೆದಿರುವ ಶಶಾಂಕ್ ಶೇಷಗಿರಿ ಅವರು ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉದಯ್ ಲೀಲಾ ಅವರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.

ಅಂದಹಾಗೆ, ಈ ಸಿನಿಮಾದ ಶೀರ್ಷಿಕೆ ಇನ್ನೂ ಬಹಿರಂಗ ಆಗಿಲ್ಲ. ಶೀಘ್ರದಲ್ಲೇ ಆ ಬಗ್ಗೆ ಮಾಹಿತಿ ಸಿಗಲಿದೆ. ಶಿವಮಣಿ, ಅಶ್ವಿನ್ ಹಾಸನ್, ಕರಿಸುಬ್ಬು ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದಿತ್ಯ ಮತ್ತು ರಂಜನಿ ರಾಘವನ್ ಅವರ ಕಾಂಬಿನೇಷನ್​ ಬಗ್ಗೆ ನಿರೀಕ್ಷೆ ಮೂಡಿದೆ. ಕಿರುತೆರೆಯಲ್ಲಿ ಮಿಂಚಿದ ಬಳಿಕ ರಂಘನಿ ರಾಘವನ್​ ಅವರಿಗೆ ಸಿನಿಮಾಗಳಿಂದ ಸಾಕಷ್ಟು ಆಫರ್ ​ಗಳು ಬರುತ್ತಿವೆ. ತಮಗೆ ಒಪ್ಪುವಂತಹ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

RELATED ARTICLES
- Advertisment -
Google search engine

Most Popular