ಹುಣಸೂರು:ಅ.17: ದೇಶಕ್ಕೆ ಕೊಡುಗೆ ಕೊಟ್ಟ ಮಹನೀಯರ ವಿಚಾರಧಾರೆಯನ್ನು ಯುವ ಪೀಳಿಗೆಗೆ ಅರ್ಥಪೂರ್ಣವಾಗಿ ತಿಳಿಸಿದಾಗ ಮಾತ್ರ ಅವರಿಗೆ ಗೌರವ ಸಿಗಲು ಸಾಧ್ಯವೆಂದು ಶಾಸಕ ಜಿ.ಡಿ.ಹರೀಶ್ ಗೌಡ ತಿಳಿಸಿದರು.
ನಗರದ ತಾಲೂಕು ಕಛೇರಿಯಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶ ಮತ್ತು ವಿಶ್ವಕ್ಕೆ ನಿಸ್ವಾರ್ಥ ಸೇವೆ ನೀಡಿದ ಮಹನೀಯರನ್ನು ವರ್ಷಕ್ಕೆ ಒಮ್ಮೆಮಾತ್ರ ನೆನೆಯದೆ ನಿರಂತರ ನೆನಪು ಮಾಡಿಕೊಳ್ಳುತ್ತ ಅವರ ಆದರ್ಶಗಳನ್ನು ನಮ್ಮ ಬದುಕಿಗೆ ಅಳವಡಿಸಿಕೊಳ್ಳಬೇಕಿದೆ ಎಂದರು.
ವಾಲ್ಮೀಕಿ ಯವರು ಮಹಾಕಾವ್ಯ ರಾಮಯಣ ಬರೆಯುವ ಮೂಲಕ ಭಾರತ ದೇಶಕ್ಕೆ ವಿಶ್ವಜ್ಞಾನಿಯಾಗಿದ್ದಾರೆ. ಇಂತಹ ಮಹನೀಯರನ್ನು ಜಾತಿಯ ಸಂಕೋಲೆಯಲ್ಲಿ ಕೂಡಿಹಾಕದೇ ವಿಶ್ವಮಾನವರಾಗಿ ರೂಪಗೊಳ್ಳುವಂತೆ ನೋಡಬೇಕಿದೆ ಎಂದರು.
ಉಪವಿಭಾಗಾಧಿಕಾರಿ ವಿಜಯಕುಮಾರ್ ಮಾತನಾಡಿ, ನಮ್ಮ ಪೂರ್ವ ಮಹನೀಯರು ಬಿಟ್ಟು ಹೋದ ಆದರ್ಶ , ಮೌಲ್ಯಗಳನ್ನು ಬದುಕಿನ ನಡುವೆ ಮೈಗೂಡಿಸಿಕೊಂಡು. ಅದರಂತೆ ನಡೆದರೆ ನಮ್ಮ ಜೀವನ ಸಾರ್ಥಕವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ತಹಶಿಲ್ದಾರ್ ಮಂಜುನಾಥ್ , ಸಾವಿರಾರು ವರುಷಗಳ ಹಿಂದೆ. ಮಹಾಕಾವ್ಯ ರಾಮಾಯಣ ರಚಿಸಿ. ಇಂದಿಗೂ ಹೊಸತನದ ಚಿಂತನೆಗಳನ್ನು ನಮ್ಮ ಯುವಪೀಳಿಗೆ ತಿಳಿಸುವ ಮೂಲಕ. ಇಡೀ ಸಮಾಜಕ್ಕೆ ಬೆಳಕಾಗಿದ್ದಾರೆ ಎಂದರು.
ತಾಲೂಕು ನಾಯಕರ ಸಂಘದ ಕಾರ್ಯದರ್ಶಿ ರವಿ ಮಾತನಾಡಿ, ಹಿಂದಿನ ಮಹನೀಯರು. ಮನುಕುಲಕ್ಕೆ ಜ್ಞಾನದ ಬುತ್ತಿಯನ್ನು ನೀಡಿದ್ದಾರೆ. ಅದನ್ನು ತೆರದು ನಮ್ಮಲಿರುವ ಅಜ್ಞಾನವನ್ನು ಹೋಗಲಾಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ, ನಗರಸಭೆ ಅಧ್ಯಕ್ಷ ಶರವಣ, ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಇಒ ಹೊಂಗಯ್ಯ, ಬಿಇಒ ಮಹದೇವ್, ಪೌರಾಯುಕ್ತೆ ಮಾನಸ, ಸಿಪಿಐ ಸಂತೋಷ್ ಕಶ್ಯಪ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊಸೂರು ಕುಮಾರ್, ದಲಿತ ಮುಖಂಡ ನಿಂಗರಾಜ ಮಲ್ಲಾಡಿ, ಸೋಮನಹಖ್ಳಿ ಪ್ರಸನ್ನ, ನಾಯಕ ಸಮಾಜದ ಕಾಳಿದಾಸ ನಾಯಕ, ದೇವರಾಜು, ನಿಲವಾಗಿಲು ಪ್ರಭಾಕರ್ , ಶಿವಣ್ಣ, ಹಾಗೂ ರಾಷ್ಟ್ರೀಯ ಹಬ್ಬಗಳ ಸಮಿತಿಯ ಜಯರಾಂ, ರಾಚಪ್ಪ, ಭಾಸ್ಕರ್ ಇದ್ದರು.