ಮೈಸೂರು: ಅಂತರಾಷ್ಟ್ರೀಯ ಲಯನ್ ಸಂಸ್ಥೆ ಜಿಲ್ಲೆ 317 ಜಿ ಮೈಸೂರಿನ ತಿಲಕ್ ನಗರದಲ್ಲಿರುವ ಲಯನ್ಸ್ ಕ್ಲಬ್ ಮೈಸೂರ್ ನ ಅಧ್ಯಕ್ಷರಾದ ಲಯನ್ ಬಿ ಭಾರತಿಯವರ ಹುಟ್ಟು ಹಬ್ಬದ ಪ್ರಯುಕ್ತ ಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ವರ್ಷದ ಅವಧಿಗೆ ಎರಡು ನವಿಲುಗಳನ್ನು ಮೃಗಾಲಯದ ಮ್ಯಾನೇಜರ್ ರಾಜೇಗೌಡರು ರವರಿಗೆ ಚೆಕ್ ನೀಡುವುದರ ಮೂಲಕ ದತ್ತು ತೆಗೆದುಕೊಳ್ಳಲಾಯಿತು.
ಮೈಸೂರಿನ ಬನ್ನಿಮಂಟಪದಲ್ಲಿರುವ ಸಾಯಿ ರಂಗ ವಿದ್ಯಾ ಸಂಸ್ಥೆಯಲ್ಲಿ ( ಕಿವುಡ ಮೂಗರ ವಸತಿ ಶಾಲೆ ) ಸೇವ ಕಾರ್ಯಕ್ರಮವಾಗಿ ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಸಿಹಿ ವಿಚಾರಿಸಲಾಯಿತು.

ಜಿಲ್ಲಾ ಸಂಚಾಲಕರಾದ ಜಿಎಸ್ ಟಿ ಲಯನ್ ಶ್ರೀನಿವಾಸ್ ಎಲ್ ವಿ, ಕ್ಲಬ್ಬಿನ ಕಾರ್ಯದರ್ಶಿಯಾದ ಲಯನ್ ಶಿವಕುಮಾರ್, ಖಜಾಂಚಿ ಲಯನ್ ಜೆ ಲೋಕೇಶ್, ವಲಯ ಅಧ್ಯಕ್ಷರು ಲಯನ್ ಗಿರೀಶ್, ಬಿ ಶಿವಣ್ಣ,ಪ್ರತಿಮಾ ರಮೇಶ್, ಲಯನ್ ಸುರೇಶ್, ಲಯನ್ ಮುಕೇಶ್, ಲಯನ್ ಉನ್ನತಿ, ಲಯನ್ ವಿರೂಪಾಕ್ಷ, ಲಯನ್ ಪಿ ರಮೇಶ್, ಲಯನ್ ಕೃಷ್ಣಮೂರ್ತಿ, ಲಯನ್ ಗೀತಾ ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು.
