ಗುಂಡ್ಲುಪೇಟೆ: ಜೀವನದಲ್ಲಿ ಶಿಸ್ತಿಗೆ ಹೆಚ್ಚಿನ ಮಹತ್ವವಿದ್ದು, ಪ್ರತಿಯೊಬ್ಬರು ಶಿಸ್ತು ಅಳವಡಿಸಿಕೊಳ್ಳಬೇಕೆಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಎಂ.ರಾಮಚಂದ್ರ ಸಲಹೆ ನೀಡಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭಗತ್ ಸಿಂಗ್ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ನಡೆದ ‘ರೋವರ್ಸ್ ಮತ್ತು ರೇಂಜರ್ಸ್ ಘಟಕದ ಮಹತ್ವ’ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯಶಸ್ವಿ ವ್ಯಕ್ತಿಗಳಾಗಲು ಜೀವನದಲ್ಲಿ ಸೇವೆ ಮತ್ತು ಶಿಸ್ತು ಬಹುಮುಖ್ಯ. ವೈಯಕ್ತಿಕ ಹಿತಾಸಕ್ತಿಗಾಗಿ ಜೀವನವಿಡಿ ದುಡಿದರೂ ಪ್ರಯೋಜನವಿಲ್ಲ. ಆದರೆ ಜೀವನದಲ್ಲಿ ಸೇವೆಗಾಗಿ ಬದುಕಿದರೆ ಅದು ಸಾರ್ಥಕವಾಗುತ್ತದೆ. ಭವಿಷ್ಯದ ಪೀಳಿಗೆ ಸೇವೆಯನ್ನು ಸ್ಮರಿಸುತ್ತಾರೆ ಎಂದರು.
ರೋವರ್ಸ್ ಮತ್ತು ರೇಂಜರ್ಸ್ ಘಟಕದಲ್ಲಿ ಸೇರಿದವರು ಪ್ರಮುಖವಾಗಿ ಶಿಸ್ತನ್ನು ಕಲಿಯುತ್ತಾರೆ. ಜೀವನದಲ್ಲಿ ಶಿಸ್ತಿಗೆ ಅತ್ಯಂತ ಹೆಚ್ಚಿನ ಮಹತ್ವವಿದ್ದು, ಅಂತಹ ವ್ಯಕ್ತಿ ಜೀವನದಲ್ಲೂ ಯಶಸ್ವಿಯಾಗುತ್ತಾನೆ. ಆದ್ದರಿಂದ ರೋವರ್ಸ್ ಮತ್ತು ರೇಂಜರ್ಸ್ ಬಗ್ಗೆ ಪ್ರತಿಯೊಬ್ಬರು ಆಸಕ್ತಿ ಹೊಂದಬೇಕು. ಸಮಾಜದಲ್ಲಿ ಸೇವೆಯ ಮಹತ್ವ ತಿಳಿಸಲು ಮತ್ತು ಶಿಸ್ತು ಮೂಡಿಸಲು ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾಲೇಜಿನಲ್ಲಿ ವಿಶೇಷ ಉಪನ್ಯಾಸದ ಮೂಲಕ ರೋವರ್ಸ್ ಮತ್ತು ರೇಂಜರ್ಸ್ ಬಗ್ಗೆ ಸಮಾಜಕ್ಕೆ ತಿಳಿಸುವ ಕಾರ್ಯ ಮಹತ್ವದ್ದಾಗಿದೆ. ಇದು ಎಲ್ಲಾ ಕಡೆ ನಡೆಯಬೇಕು. ಜನರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಡಾ.ಎ.ಆರ್.ಮದನಕುಮಾರ್, ರೋವರ್ಸ್ ಸಂಚಾಲಕ ಡಾ.ಉಮೇಶ, ಹಿರಿಯ ಪ್ರಾಧ್ಯಾಪಕ ಪೆÇ್ರ.ಕೆ.ಚಾಮರಾಜು, ರೇಂಜರ್ಸ್ ಸಂಚಾಲಕ ಪೆÇ್ರ.ಸಂಯುಕ್ತಸಿಂಗ್ ಸೇರಿದಂತೆ ಉಪನ್ಯಾಸಕರು ಹಾಜರಿದ್ದರು.