ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಜನತಾ ಪಾಲಿಟಿಕ್ಸ್ ಬಳಿಕ ಇದೀಗ ಅಭಿನಂದನಾ ಪಾಲಿಟಿಕ್ಸ್ ಶುರುವಾಗಿದೆ. ಇಂದು ಸ್ವಾಮಿ ದ್ವಯರಿಗೆ ಅದ್ದೂರಿ ಅಭಿನಂದನ ಸನ್ಮಾನ ಏರ್ಪಡಿಸಲಾಗಿದ್ದು, ಜಿದ್ದಿಗೆ ಬಿದ್ದವರಂತೆ ಎರಡು ಪಕ್ಷದ ನಾಯಕರಿಂದ ತಮ್ಮ ತಮ್ಮ ನಾಯಕನಿಗೆ ಅದ್ದೂರಿ ಸನ್ಮಾನ ಆಯೋಜನೆ ಮಾಡಲಾಗಿದೆ.
ಇತ್ತ ಪಾಂಡವಪುರ ಪಟ್ಟಣದಲ್ಲಿ ಜೆಡಿಎಸ್ ಬಿಜೆಪಿ ಪಕ್ಷದ ಮುಖಂಡರಿಂದ ಕೇಂದ್ರ ಸಚಿವ ಎಚ್ ಡಿ ಕೆ ಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ . ಮಾಜಿ ಶಾಸಕ ಪುಟ್ಟರಾಜು ನೇತೃತ್ವದಲ್ಲಿ ತಮ್ಮ ನಿವಾಸದ ಬಳಿ ಬೃಹತ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ,
ಅತ್ತ ಪಾಂಡವಪುರ ತಾಲೂಕಿನ ಕಜ್ಜಿ ಕೊಪ್ಪಲು ಗ್ರಾಮದಲ್ಲಿ ರೈತ ಸಂಘ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ರಿಂದ ಸಚಿವ ಚೆಲುವರಾಯಸ್ವಾಮಿಗೆ ಸನ್ಮಾನ ಹಾಗೂ ಅಭಿನಂದನೆ ಸಮಾರಂಭ ಆಯೋಜಿಸಲಾಗಿದೆ.
ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿ, ಜೆಡಿಎಸ್ ಗೆ ಟಕ್ಕರ್ ನೀಡಲಾಗುತ್ತಿದೆ. ಇಬ್ಬರು ನಾಯಕರ ಕಾರ್ಯಕ್ರಮದಿಂದಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ರಾರಾಜಿಸುತ್ತಿರುವ ಎರಡು ಪಕ್ಷದ ಕಟೌಟ್ ,ಬ್ಯಾನರ್ ಹಾಗೂ ಬಂಟಿಂಗ್ಸ್.
ಸಂಸದ ಕುಮಾರಸ್ವಾಮಿ ಗೆಲುವಿನ ಬಳಿಕ ಲಯ ಕಂಡುಕೊಂಡ ಜಿಲ್ಲೆಯ ದಳಪತಿಗಳಿಂದ ಕೈಗೆ ಟಕ್ಕರ್ ನೀಡಲಾಗುತ್ತಿದೆ. ಇತ್ತ ಕುಮಾರಸ್ವಾಮಿ ಗೆಲುವಿನ ಬಳಿಕ ಅಲರ್ಟ್ ಆದ ದಳಪತಿಗಳ ದಾಳಕ್ಕೆ ಜಿಲ್ಲೆಯ ಕೈ ನಾಯಕರಿಂದ ಪ್ರತಿಧಾಳ ಹೂಡಲಾಗಿದೆ. ಸ್ವಾಮಿದ್ವಯರ ಸಚಿವ ಸ್ಥಾನದಿಂದ ಜಿಲ್ಲೆಯಲ್ಲಿ ರಾಜಕೀಯ ರಂಗೇರಿದೆ.