ಮದ್ದೂರು: ಮದ್ದೂರಿನಲ್ಲಿ ಜಿಲ್ಲಾ ಕಿಶನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೇಶಹಳ್ಳಿ ಆರ್ ಮೋಹನ್ ಕುಮಾರ್ ಮಾತನಾಡಿ ಜುಲೈ 31ರ ನಂತರ ದಕ್ಷಿಣ ಭಾಗದ ಸಕ್ಕರೆ ಕಾರ್ಖಾನೆಗಳನ್ನು ಪ್ರಾರಂಭ ಮಾಡಬೇಕು ಅದಕ್ಕೂ ಮೊದಲೇ ಪ್ರಾರಂಭ ಮಾಡಬಾರದು ಎಂದು ರಾಜ್ಯ ಕಬ್ಬು ಅಭಿವೃದ್ಧಿ ನಿರ್ದೇಶಕರು ಹಾಗೂ ಸಕ್ಕರೆ ಆಯುಕ್ತರು ಹೊರಡಿಸಿರುವ ಆದೇಶ ರೈತ ವಿರೋಧಿಯಾಗಿದ್ದು, ಈ ಕೂಡಲೇ ಪರಿಶೀಲಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ನೀಡಿದರು.