ಯಳಂದೂರು ಜು ೩೧ : ತಾಲೂಕಿನ ಅಗರ ಹಾಗೂ ಮಾಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಿತು.
ಇದರಲ್ಲಿ ೧೨ ಸದಸ್ಯರಿರುವ ಅಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಅನುಸೂಚಿತ ಪಂಗಡಕ್ಕೆ ನಿಗಧಿಯಾಗಿತ್ತು. ಇದರಲ್ಲಿ ಅಧ್ಯಕ್ಷರಾಗಿ ಮುದ್ದನಾಯಕ ಎಂಬುವವರು ಸಾಮಾನ್ಯ ಮಹಿಳಾ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಿರ್ಮಲ ಎಂಬುವವರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿದ್ದ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕಿ ಎಸ್. ಸರಿತಾಕುಮಾರಿ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ಸದಸ್ಯರಾದ ರಾಜಮ್ಮ, ಕುಮಾರ, ಅನ್ನಪೂರ್ಣ, ನಾಗರಾಜು, ಸುರೇಶ, ಶೋಭಾ, ನಳಿನಕುಮಾರಿ, ವೆಂಕಟಾಚಲ, ಆರ್. ಸ್ವಾಮಿ ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ಧರಾಜು ಮುಖಂಡರಾದ ಅಗರನಂಜುoಡ, ಕಿನಕಹಳ್ಳಿ ಪ್ರಭುಪ್ರಸಾದ್ ಸೇರಿದಂತೆ ಅನೇಕರು ಅಭಿನಂದಿಸಿದರು.
ಮಾoಬಳ್ಳಿ ಅಧ್ಯಕ್ಷರಾಗಿ, ಮಲ್ಲೇಶ್ ಉಪಾಧ್ಯಕ್ಷೆಯಾಗಿ ಮುಬಾರಕ್‌ಉನ್ನೀಸಾ ಆಯ್ಕೆ: ತಾಲೂಕಿನ ದೊಡ್ಡ ಗ್ರಾಮಗಳಲ್ಲಿ ಒಂದಾದ ಮಾಂಬಳ್ಳಿ ಗ್ರಾಮದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೂ ಸೋಮವಾರ ಚುನಾವಣೆ ನಡೆಯಿತು. ೧೫ ಸದಸ್ಯರಿರುವ ಈ ಪಂಚಾಯಿತಿಯಲ್ಲಿ ಅನುಸೂಚಿತ ಜಾತಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಆರ್. ಮಲ್ಲೇಶ್ ಹಾಗೂ ಎಸ್. ದೇವರಾಜು ಸ್ಪರ್ಧಿಸಿದ್ದರು. ಇದರಲ್ಲಿ ಆರ್. ಮಲ್ಲೇಶ್ ೧೦ ಮತಗಳನ್ನು ಪಡೆಯುವ ಮೂಲಕ ವಿಜೇತರಾದರು. ಇದೇ ಸಂದರ್ಭದಲ್ಲಿ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಇದರಲ್ಲಿ ಮುಬಾರಕ್ ಉನ್ನೀಸಾ ಹಾಗೂ ಬಿ. ಸುವರ್ಣಾ ಸ್ಪರ್ಧೆ ಮಾಡಿದ್ದರು. ಇದರಲ್ಲಿ ಮುಬಾರಕ್‌ಉನ್ನೀಸಾ ೮ ಮತಗಳನ್ನು ಪಡೆದ ಹಿನ್ನೆಲೆಯಲ್ಲಿ ಸಹಾಯಕ ತೋಟಗಾರಿಕಾ ಅಧಿಕಾರಿ ಬಿ.ವಿ. ಶಿವರಂಜಿನಿ ಇವರು ವಿಜೇತರಾಗಿದ್ದಾರೆ ಎಂದು ಘೋಷಣೆ ಮಾಡಿದರು.
ಸದಸ್ಯರಾದ ಇಂದ್ರಮ್ಮ, ವರದರಾಜು, ರಾಜೇಶ್ವರಿ, ಜ್ಯೋತಿ, ಲಕ್ಷ್ಮಿ, ಸೌಭಾಗ್ಯಲಕ್ಷ್ಮಿ, ದರ್ಶನ್‌ಕುಮಾರ್, ಮುತ್ತುರಾಜು, ಲಕ್ಷ್ಮಿಪತಿ, ರತ್ನಮ್ಮ, ಮುಜಾಹಿದ್ದುಲ್ಲಾ ತಾ.ಪಂ ಮಾಜಿ ಪಿಡಿಒ ರಮೇಶ್ ಅಧ್ಯಕ್ಷ ಜೆ. ಶಕೀಲ್ ಅಹಮ್ಮದ್ ಮುಖಂಡ ಮಾಂಬಳ್ಳಿ ರಾಮು ಸೇರಿದಂತೆ ಅನೇಕರು ಇದ್ದರು.