Friday, June 13, 2025
Google search engine

HomeUncategorizedರಾಷ್ಟ್ರೀಯಅಹಮದಾಬಾದ್: ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಪತನ, 110 ಸಾವು

ಅಹಮದಾಬಾದ್: ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನ ಪತನ, 110 ಸಾವು

ಅಹಮದಾಬಾದ್: ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮೇಘಾನಿ ನಗರ ಬಳಿ ಪತನಗೊಂಡಿದ್ದು, 110 ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಇಂದು ಮಧ್ಯಾಹ್ನ 1:17ಕ್ಕೆ ಟೇಕಾಫ್ ಆದ ವಿಮಾನವು 33 ನಿಮಿಷಗಳಲ್ಲಿ ಪತನಗೊಂಡಿತು. 242 ಪ್ರಯಾಣಿಕರಲ್ಲಿ 169 ಭಾರತೀಯ ಪ್ರಯಾಣಿಕರು, 53 ಬ್ರಿಟಿಷ್ ನಾಗರಿಕರು, ಪೋರ್ಚುಗಲ್‌ನ 7 ಜೊತೆಗೆ ಓರ್ವ ಕೆನಡಾ ಪ್ರಜೆ ,ಇಬ್ಬರು ಪೈಲೆಟ್ ಗಳು ಹಾಗೆಯೇ 10 ಕ್ಯಾಬಿನ್ ಕ್ಕ್ರೂ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪತನದ ತಕ್ಷಣ ಬೆಂಕಿ ಕಾಣಿಸಿಕೊಂಡಿತು. 132 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಮಾನಚಾಲಕರಾಗಿ ಸುಮಿತ್ ಸಭರ್ವಾಲ್ ಸೇವೆ ಸಲ್ಲಿಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ಎಲ್ಲಾ ಹಾರಾಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಜೋರಾಗಿದೆ.

RELATED ARTICLES
- Advertisment -
Google search engine

Most Popular