ಅಹಮದಾಬಾದ್‌ನ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದ ಪತನಗೊಂಡಿದೆ. ಈ ದುರ್ಘಟನೆ ಜನವಸತಿ ಪ್ರದೇಶವಾದ ಮೇಘಾನಿಯಲ್ಲಿ ಮಧ್ಯಾಹ್ನ 1:50ಕ್ಕೆ ನಡೆದಿದೆ. ವಿಮಾನದಲ್ಲಿ 252 ಪ್ರಯಾಣಿಕರಿದ್ದು, ಅಪಘಾತದ ತೀವ್ರತೆಗೆ ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ. ವಿಮಾನ 2 ಕಿ.ಮೀ ದೂರದಲ್ಲಿ ಪತನಗೊಂಡಿದ್ದು, ಕಟ್ಟಡದ ಮೇಲೆ ಬಿದ್ದ ಕಾರಣ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಸ್ಥಳಕ್ಕೆ ಏಳು ಅಗ್ನಿಶಾಮಕ ವಾಹನಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.