Friday, April 4, 2025
Google search engine

HomeUncategorizedರಾಷ್ಟ್ರೀಯಮೋದಿ, ಅಮಿತ್ ಶಾ ಅವರ ಎಐ ವಿಡಿಯೊ ಪೋಸ್ಟ್: ಆಪ್ ವಿರುದ್ಧ ಎಫ್ಐಆರ್ ದಾಖಲು

ಮೋದಿ, ಅಮಿತ್ ಶಾ ಅವರ ಎಐ ವಿಡಿಯೊ ಪೋಸ್ಟ್: ಆಪ್ ವಿರುದ್ಧ ಎಫ್ಐಆರ್ ದಾಖಲು

ಹೊಸ ದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾರ ಎಐ (AI) ವಿಡಿಯೊಗಳನ್ನು ತನ್ನ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ ದಿಲ್ಲಿ ಪೊಲೀಸರು ಆಮ್ ಆದ್ಮಿ ಪಕ್ಷದ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಆಪ್ ಎಕ್ಸ್ ಖಾತೆಯ ಮೂಲಕ ಜನವರಿ 10 ಹಾಗೂ ಜನವರಿ 13ರಂದು ಪೋಸ್ಟ್ ಮಾಡಲಾಗಿದ್ದ ಆಕ್ಷೇಪಾರ್ಹ ಫೋಟೊಗಳು ಹಾಗೂ ವಿಡಿಯೊಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೂಕ್ತ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಡೀಪ್ ಫೇಕ್ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಸೃಷ್ಟಿಸಲಾಗಿರುವ ವಿಡಿಯೊವೊಂದರಲ್ಲಿ 90ರ ದಶಕದ ಬಾಲಿವುಡ್ ಚಿತ್ರವೊಂದರ ಖಳನಾಯಕರ ಮುಖಗಳನ್ನು ಬಿಜೆಪಿ ನಾಯಕರ ಮುಖಗಳೊಂದಿಗೆ ಬದಲಾಯಿಸಲಾಗಿದ್ದು, ಅವರು ದಿಲ್ಲಿ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸುತ್ತಿರುವಂತೆ ಧ್ವನಿಯನ್ನು ತಿರುಚಲಾಗಿದೆ.

ದೂರನ್ನು ವಿಶ್ಲೇಷಿಸಿದ ನಂತರ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆಗೆ ಚಾಲನೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular