Friday, April 18, 2025
Google search engine

Homeರಾಜ್ಯಸುದ್ದಿಜಾಲಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆ ಅವಿಸ್ಮರಣೀಯ-ಟಿ ಪಿ ನಂದೀಶ್ ಕುಮಾರ್

ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆ ಅವಿಸ್ಮರಣೀಯ-ಟಿ ಪಿ ನಂದೀಶ್ ಕುಮಾರ್

ನಿವೃತ್ತಿ ಶಿಕ್ಷಕರಿಗೆ ಸನ್ಮಾನ ,ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ,ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ

ಕೆ.ಆರ್ ನಗರ : ವೃತ್ತಿಗೆ ಸೇರಿದಾಗಿನಿಂದ ನಿವೃತ್ತಿಯವರೆಗೂ ಒಂದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಆಡಳಿತ ಮಂಡಳಿಯವರ ಅಣತಿಯಂತೆ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸೇವೆಯನ್ನು ಮರೆಯುವಂತಿಲ್ಲ ಎಂದು ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಟಿ ಪಿ ನಂದೀಶ್ ಕುಮಾರ್ ತಿಳಿಸಿದರು.

ಪಟ್ಟಣದ ಭಾರತಿ ವಿದ್ಯಾ ಮಂದಿರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 2024ನೇ ನೂತನ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾಧ್ಯಕ್ಷರು ಸಾರ್ವಜನಿಕವಾಗಿ ಸರ್ಕಾರಿ ಶಿಕ್ಷಕರಿಗೆ ನೀಡುತ್ತಿರುವ ಸವಲತ್ತು ಮತ್ತು ವರ್ಗಾವಣೆ ನಮ್ಮ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡದಿರುವುದು ನೋವುಂಟು ಮಾಡಿದೆ ಎಂದರು. ಕೆ ಆರ್ ನಗರ ತಾಲೂಕಿನಲ್ಲಿ 17 ಶಾಲೆಗಳು ಅನುದಾನಿತ ಪ್ರಾಥಮಿಕ ಶಾಲೆಗಳಿದ್ದು ಅತಿ ಕಮ್ಮಿ ಶಿಕ್ಷಕರಿರುವ ನಮ್ಮ ಸಂಘದಲ್ಲಿ ಅತ್ಯಂತ ಪ್ರಾಮಾಣಿಕ ಮತ್ತು ಪಾರದರ್ಶಕವಾಗಿ ಸಂಘ ಯಶಸ್ವಿಯಾಗಿ ನಡೆಯುತ್ತಿದ್ದು ಪ್ರತಿವರ್ಷ ನಿವೃತ್ತ ಶಿಕ್ಷಕರಿಗೆ ಮತ್ತು ಶಿಕ್ಷಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸನ್ಮಾನ ಮತ್ತು ಡೈರಿ ಕ್ಯಾಲೆಂಡರ್ಗಳ ಬಿಡುಗಡೆ ಕಾರ್ಯಕ್ರಮಗಳನ್ನು ಮಾಡುತ್ತಾ ಸಂಗವು ದಿನ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವುದು ಬಹಳ ಸಂತೋಷದ ಸಂಗತಿಯಾಗಿದೆ ಎಂದರು.

ಕೆಲವು ಆಡಳಿತ ಮಂಡಳಿಯವರ ಕಿರುಕುಳದಿಂದ ಕೆಲವು ಶಿಕ್ಷಕರು ಸೇವಾ ಅವಧಿಯಲ್ಲಿ ಮಾನಸಿಕ ನೋವನ್ನು ಅನುಭವಿಸಿರುವುದು ಬಹಳ ದುರಂತದ ಸಂಗತಿಯಾಗಿದ್ದು ಇನ್ನು ಕೆಲವು ಸಂಸ್ಥೆಗಳ ಆಡಳಿತ ಮಂಡಳಿಯವರು ಸರ್ಕಾರಿ ಶಿಕ್ಷಕರಿಗಿಂತಲೂ ಹೆಚ್ಚಿನ ಗೌರವ ಕೊಡುವ ಜೊತೆಗೆ ನಿವೃತ್ತರಾದ ಶಿಕ್ಷಕರಿಗೆ 50 ರಿಂದ 1 ಲಕ್ಷದವರೆಗೆ ಸಂಸ್ಥೆಯ ವತಿಯಿಂದ ಹಣ ನೀಡುತ್ತಿರುವುದು ಸಂತಸದ ಸಂಗತಿಯಾಗಿದ್ದು ಎಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಮುಂದಿನ ದಿನಗಳಲ್ಲಿ ತಮ್ಮ ಕುಟುಂಬಗಳು ಸೇರಿದಂತೆ ಎಲ್ಲರಿಗೂ ಆರೋಗ್ಯ ತಪಾಸಣೆ ಪವಿತ್ರ ಸ್ಥಳಗಳಿಗೆ ಪ್ರವಾಸ ಸೇರಿದಂತೆ ಇನ್ನಿತರ ಕಾರ್ಯ ಚಟುವಟಿಕೆಗಳಲ್ಲಿಯೂ ತೊಡಗುವಂತೆ ಸಲಹೆ ನೀಡಿದರು. ಉದ್ಘಾಟನಾ ಮಾತುಗಳನ್ನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್ ಕೃಷ್ಣಪ್ಪ ನನ್ನ ಆಡಳಿತ ಅವಧಿಯಲ್ಲಿ ಯಾವುದೇ ಅನುದಾನಿತ ಮತ್ತು ಹಾಗೂ ಅನಿತಾ ಅನುದಾನಿತವಿಲ್ಲದ ಎಲ್ಲಾ ಶಿಕ್ಷಕರನ್ನು ಸರ್ಕಾರಿ ಶಿಕ್ಷಕರಿಗೆ ನೀಡುವ ಗೌರವವನ್ನು ನೀಡುತ್ತಾ ಬಂದಿದ್ದೇನೆ ಮುಂದೆಯೂ ನೀಡುತ್ತೇನೆ ಯಾವುದೇ ತಾರತಮ್ಯ ಮಾಡುವುದಿಲ್ಲ ವೆಂದು ಭರವಸೆ ನೀಡಿದರು.

ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಸರ್ಕಾರಿ ಶಾಲೆಗೆ ನೀಡುವಂತೆ ಅನುದಾನಿತ ಅನುದಾನಿತವಲ್ಲದ ಎಲ್ಲಾ ಶಾಲೆಗಳಿಗೂ ಸಮನಾಗಿ ನೀಡುವುದಲ್ಲದೆ ಅನುದಾನಿತ ಶಿಕ್ಷಕರಿಗೆ ಪ್ರತಿ ತಿಂಗಳ ಐದನೇ ತಾರೀಖಿನಂದು ವೇತನ ನೀಡುವಂತೆ ನೋಡಿಕೊಳ್ಳುತ್ತಿದ್ದೇನೆ ಮುಂದೆಯೂ ನೋಡುತ್ತೇನೆ ಎಂದು ತಿಳಿಸಿದ ಶಿಕ್ಷಣಾಧಿಕಾರಿ ಅನುದಾನಿತ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಆಡಳಿತ ಮಂಡಳಿಯಲ್ಲಿ ವಿಶ್ವಾಸದಿಂದ ಮತ್ತು ಪ್ರೀತಿಯಿಂದ ಕರ್ತವ್ಯ ನಿರ್ವಹಿಸುವ ಜೊತೆಗೆ ಆಡಳಿತ ಮಂಡಳಿ ಅವರ ವಿಶ್ವಾಸವನ್ನು ಗಳಿಸಿ ಹಾಗೂ ಶಾಲೆಯಲ್ಲಿ ಮಕ್ಕಳ ಹಾಜರಾತಿ ಕಮ್ಮಿಯಾಗುತ್ತಿದ್ದು ಪ್ರತಿಶಾಲೆಗಳಲ್ಲಿಯೂ ಹಾಜರಾತಿ ಹೆಚ್ಚಾಗುವಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರದಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಅಧ್ಯಕ್ಷೀಯ ಮಾತುಗಳನ್ನು ಎಸ್. ಆರ್ ಭರತ್ ಕುಮಾರ್ ಮಾತನಾಡಿದರೆ, ದಿನದರ್ಶಿಕೆ ಬಿಡುಗಡೆ ಮಾಡಿದ ಕ್ಷೇತ್ರ ಸಮನ್ವಯ ಅಧಿಕಾರಿ ವೆಂಕಟೇಶ್, ಅಕ್ಷರ ದಾಸೋಹ ಅಧಿಕಾರಿ ಪ್ರದೀಪ್ ಕುಮಾರ್, ದೈಹಿಕ ಶಿಕ್ಷಣಾಧಿಕಾರಿ ಕುಮಾರಸ್ವಾಮಿ ಮಾತನಾಡಿದರು .

ವೇದಿಕೆಯಲ್ಲಿ ಇ ಸಿ ಓ ಜನಾರ್ಧನ್ ದಾಸಪ್ಪ, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ತಾಲೂಕ್ ಸಂಘದ ಗೌರವ ಅಧ್ಯಕ್ಷ ಬಸವರಾಜ್ ರೇವಣ್ಣ, ಮನೋಹರ ,ಲೋಕೇಶ್, ಚೆಲುವರಾಜ್, ವಿನಾಯಕ ನಾಯಕ ,ಚಿಕ್ಕೇಗೌಡ, ಚಕ್ರಪಾಣಿ ,ಗಂಗಾಧರ, ರವಿಕುಮಾರ್, ಶ್ರೀನಿವಾಸ್ ,ದೊಡ್ಮಗೇಗೌಡ, ರಾಮು, ಜವರ ಮಂಜುನಾಥ್ ,ಕಮತ್ತಳ್ಳಿ ಮಧು, ಜಲೇಂದ್ರ, ಕುಮಾರಪ್ಪ, ಕಾವೇರಿ ,ಜಯಶ್ರೀ ಸೇರಿದಂತೆ ಇನ್ನಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular