Friday, April 11, 2025
Google search engine

Homeರಾಜ್ಯಏರ್ ಶೋ ಹಿನ್ನೆಲೆ ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆಗೆ ನಿಷೇಧ

ಏರ್ ಶೋ ಹಿನ್ನೆಲೆ ಬೆಂಗಳೂರಿನ 21 ಕೆರೆಗಳಲ್ಲಿ ಮೀನುಗಾರಿಕೆಗೆ ನಿಷೇಧ

ಬೆಂಗಳೂರು: 2025ನೇ ಸಾಲಿನ ಏರ್ ಶೋಗೆ ದಿನಗಣನೆ ಆರಂಭವಾಗಿದೆ. ಇದೇ ಫೆ.10 ರಿಂದ 14ರ ವರೆಗೆ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ದೇಶಿಯ ಹಾಗೂ ವಿದೇಶಿ ವಿಮಾನಗಳು ಪ್ರದರ್ಶನಗೊಳ್ಳುತ್ತಿವೆ. ವಿಮಾನಗಳ ಸುರಕ್ಷತೆಯ ಹಿನ್ನೆಲೆ ಹಲವಾರು ಸುರಕ್ಷತಾ ಕ್ರಮಗಳನ್ನು ಕೈಕೊಳ್ಳಲಾಗುತ್ತಿದೆ.

ಅದರಂತೆ ರಾಜ್ಯ ಮೀನುಗಾರಿಕೆ ಇಲಾಖೆ ಕಳೆದ ಜ.23 ರಿಂದ ಫೆ.17ರ ವರೆಗೆ, ಬೆಂಗಳೂರು ಉತ್ತರ, ಯಲಹಂಕ ಸುತ್ತಮುತ್ತಲಿನ 21 ಕರೆಗಳಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್ ಕುಮಾರ್ ತಿಳಿಸಿದ್ದಾರೆ.

ಮೀನುಗಳು ಹೊರಗೆ ಬಂದ್ರೆ, ಪಕ್ಷಿಗಳ ಹಾರಾಟ ಹೆಚ್ಚಾಗಲಿದೆ‌. ಹೀಗಾಗಿ ವಿಮಾನಗಳ ಹಾರಾಟಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಯಲಹಂಕ ವಾಯುನೆಲೆಯ ಸುತ್ತಮುತ್ತ ಹಾಗೂ ದೇವನಹಳ್ಳಿ ವ್ಯಾಪ್ತಿಗೆ ಬರುವ ಎಲ್ಲಾ ಕೆರೆಗಳಲ್ಲಿ ಮೀನು ಹಿಡುವಳಿ ಹಾಗೂ ಮೀನು ಮಾರಾಟವನ್ನು ಸ್ಥಗತಗೊಳಿಸಲು ಎಲ್ಲಾ ಟೆಂಡರ್ ಹಾಗೂ ಗುತ್ತಿಗೆದಾರರಿಗೆ ಮೀನುಗಾರಿಕಾ ಇಲಾಖೆ ಸೂಚಿಸಿದೆ.

RELATED ARTICLES
- Advertisment -
Google search engine

Most Popular