ಉಪ್ಪಿನಂಗಡಿ: ಐರಾವತ ಬಸ್ಸೊಂದಕ್ಕೆ ಬೆಂಕಿ ಹಿಡಿದ ಘಟನೆ ಇಲ್ಲಿನ ಹಳೆಗೇಟು ಬಳಿ ಇಂದು ಗುರುವಾರ ಬೆಳಗ್ಗೆ ನಡೆದಿದೆ.
ಸ್ಥಳೀಯ ಯುವಕರ ತಂಡ ಬೆಂಕಿ ನಂದಿಸಿದ್ದು ಸಂಭವಿಸಬಹುದಾಗಿದ್ದ ಅವಘಡ ತಪ್ಪಿಸಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಕೂಡಲೇ ಸ್ಥಳದಲ್ಲಿದ್ದ ಯುವಕರ ತಂಡ ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.