ಫೆ.14 ರಂದು ಉಚಿತ ಸಾಮೂಹಿಕ ಅಕ್ಷರಭ್ಯಾಸ
ಮೈಸೂರು: ನಗರದ ವಿಜಯನಗರದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹರವರಿಂದ ಇದೇ ತಿಂಗಳು 14 ರಂದು ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಮಹರ್ಷಿ ಪಬ್ಲಿಕ್ ಶಾಲೆ ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರ ನಗರ, ನಡೆಯಲಿರುವ ಉಚಿತವಾಗಿ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆಯ ಪೋಸ್ಟರ್ ವನ್ನು ಮಾಜಿ ಸಂಸದ ಪ್ರತಾಪ್ ಸಿಂಹ ಬಿಡುಗಡೆಗೊಳಿಸಿ ಶುಭ ಹಾರೈಸಿ ಮಾತನಾಡಿದ ಅವರು ಪ್ರತಿಯೊಬ್ಬ ನಾಗರೀಕನಿಗೂ ಜೀವಿಸಲೂ ಮನೆ ಆಹಾರ ಬಟ್ಟೆ ಮೂಲಭೂತ ಸೌಲಭ್ಯವಾದರೇ, ಹುಟ್ಟಿದ ಮಗುವಿಗೂ ಅನ್ನ ಅಕ್ಷರ ಆರೋಗ್ಯ ಬದುಕಲು ಪ್ರಮುಖ ಭಾಗ, ಹಾಗಾಗಿ ಮಗುವಿಗೆ ಮಾತನಾಡುವ ಭಾಷೆ ಮತ್ತು ವಿದ್ಯೆ ಕಲಿಸುವ ಪ್ರಾರಂಭ ಹಂತ ಅಕ್ಷರಾಭ್ಯಾಸ ಇದು ಪೋಷಕರ ಮೂಲ ಕರ್ತವ್ಯ ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿದ್ದು, ತಾಯಿಯೇ ಮೊದಲ ಗುರು, ಮಗುವಿಗೆ ಅಕ್ಷರಭ್ಯಾಸ ಎನ್ನುವುದು ಜ್ಞಾನದೇಗುಲದ ಪ್ರಮುಖ ಘಟ್ಟ, ಅಕ್ಷರಭ್ಯಾಸದಲ್ಲಿ ಹೆಚ್ಚು ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ನಂತರ ಕಾರ್ಯಕ್ರಮದ ವಿವರವನ್ನು ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಎಲ್ಲಾ ಜನಾಂಗದವರಿಗೂ ಉಚಿತ ಸಾಮೂಹಿಕ ಅಕ್ಷರಭ್ಯಾಸ ಹಾಗೂ ಸರಸ್ವತಿ ಪೂಜೆ ಫೆ.14.ರ ಬುಧವಾರ ಬೆಳಗ್ಗೆ 8 ರಿಂದ 10:30 ರವರಿಗೂ ಮಹರ್ಷಿ ಪಬ್ಲಿಕ್ ಶಾಲೆ ಇಂಡಸ್ಟ್ರಿಯಲ್ ಸಬರ್ಬ್, ವಿಶ್ವೇಶ್ವರ ನಗರ, ನಡೆಯಲಿದೆ.
ಅಕ್ಷರಭ್ಯಾಸನವನ್ನು ಮಾಡಲಿಚ್ಚಿಸುವ ಮಕ್ಕಳ ಪೋಷಕರು ದೂರವಾಣಿ 9880752727/7829067769 ನೋಂದಾಯಿಸಿಕೊಳ್ಳಬಹುದು. ಅಕ್ಷರಭ್ಯಾಸ ಮಾಡಿಸುವವರ ಗಮನಕ್ಕೆ ಪ್ಲೇಟ್-ಬಳಪ ನಮ್ಮ ಟ್ರಸ್ಟ್ ವತಿಯಿಂದ ಉಚಿತವಾಗಿ ಪ್ರಸಾದ ರೂಪದಲ್ಲಿ ನೀಡಲಾಗುವುದು, ಪ್ರತ್ಯೇಕವಾಗಿ ತರುವ ಅಗತ್ಯವಿರುವುದಿಲ್ಲ. 13.ರಂದು ನೋಂದಣಿಗೆ ಕಡೆಯದಿನವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹರ್ಷಿ ಪಬ್ಲಿಕ್ ಶಾಲೆಯ ಸಿಇಓ ತೇಜಸ್ ಶಂಕರ್, ಬಿಜೆಪಿ ಮುಖಂಡರಾದ ಆರ್ ಪರಮೇಶ್ ಗೌಡ ಹಾಗೂ ಇನ್ನಿತರರು ಹಾಜರಿದ್ದರು.