ಮಂಗಳೂರು (ದಕ್ಷಿಣ ಕನ್ನಡ): ಅಲ್ ನಾಫಿಹಾ ವುಮೆನ್ಸ್ ಶರೀಹತ್ ಕೋರ್ಸ್ 2023-24ನೇ ಸಾಲಿನ ಮೂರನೇ ಸನದುದಾನ ಸಮ್ಮೇಳನವು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆಯಿತು.
ಸಮಸ್ತ ಕೇರಳ ಮುಶಾವರ ಸದಸ್ಯ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಕ್ಕಿಂಜೆ ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಕಿ ಅಲ್ ಜಲಾಲಿ ಕಾರ್ಯಕ್ರಮ ಉದ್ಘಾಟಿಸಿದರು. ಗಡಿಯಾರ ಮಸೀದಿಯ ಖತೀಬ್ ಉಮರ್ ಫೈಝಿ ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಸಂಪ್ಯ ಮಸೀದಿ ಖತೀಬ್ ಹಮೀದ್ ದಾರಿಮಿ ಸಂದೇಶ ಭಾಷಣ ಮಾಡಿದರು. ನಯಿಂ ಫೈಝಿ ಖತೀಬ್ ಅಲ್ ಮಹ್ ಬರಿ, ಖತೀಬರು ಕಲ್ಲುಗುಂಡಿ ಸನದುದಾನ ಭಾಷಣ ಮಾಡಿದರು.
ಶರೀಹತ್ ಕೋರ್ಸ್ ಮಾಡಿದ 33 ಮಂದಿ ವಿದ್ಯಾರ್ಥಿನಿಯರಿಗೆ ಶಿಕ್ಷಕಿ ಸಫೀನಾ ಬಾನು ಗಡಿಯಾರ್ ಇವರು ಸನದುದಾನ ಮಾಡಿ ಗೌರವಿಸಿದರು. ಮುಹಮ್ಮದ್ ಫಝಲ್ ಮೂಡಿಗೆರೆ ಕಿರಾಹತ್ ಪಠಿಸಿದರು. ದರ್ಸ್ ವಿದ್ಯಾರ್ಥಿ ಹನೀಫ್ ಸವಣೂರು ಸ್ವಾಗತಿಸಿದರು. ಕೊನೆಯಲ್ಲಿ ಹಾಡು, ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
