ಮಂಡ್ಯ: ನಾಗಮಂಗಲ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಅಲೀ ಅನ್ಸರ್ ಪಾಷ ,ಉಪಾಧ್ಯಕ್ಷರಾಗಿ ವಸಂತ ಲಕ್ಷ್ಮಿ ಆಯ್ಕೆಯಾದರು.
ನಾಗಮಂಗಲ ಪುರಸಭೆ ಅಧಿಕಾರ ಕೈ ವಶವಾಯಿತು. ಸಚಿವ ಚೆಲುವರಾಯಸ್ವಾಮಿ ತಂತ್ರಗಾರಿಕೆ ವರ್ಕೌಟ್ ಆಗಿದೆ. 12 ಜನ ಸದಸ್ಯರ ಪೈಕಿ ಇಬ್ಬರು ಜೆಡಿಎಸ್ ಸದಸ್ಯರು ಮತದಾನಕ್ಕೆ ಬಂದು ಮತ ಚಲಾಯಿಸದೆ ತಟಸ್ಥರಾದರು. ಇಬ್ಬರು ಸದಸ್ಯರು ಜೆಡಿಎಸ್ ಗೆ ಕೈಕೊಟ್ಟಿದ್ದರಿಂದ 1 ಮತಗಳ ಅಂತರದಿಂದ ಕಾಂಗ್ರೇಸ್ ಎರಡು ಸ್ಥಾನ ಗೆದ್ದುಕೊಂಡಿದೆ. ಗೆಲುವು ಸಾಧಿಸುತ್ತಿದ್ದಂತೆ ಕೈ ಕಾರ್ಯಕರ್ತರ ಸಂಭ್ರಮಾಚರಣೆ , ಜೈಕಾರ ಜೋರಾಗಿತ್ತು.