ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಎಲ್ಲಾ ವಾಣಿಜ್ಯ ಮಳಿಗೆಗಳು ಕಡ್ಡಾಯವಾಗಿ ಸಾಮಾನ್ಯ ಪರವಾನಗಿ ಪಡೆಯಬೇಕು ಎಂದು ಭೇರ್ಯ ಗ್ರಾ.ಪಂ.ಆಡಳಿತ ಮಂಡಳಿ ತೀರ್ಮಾನಿಸಿತು.
ಗ್ರಾ.ಪಂ.ಕಚೇರಿಯಲ್ಲಿ ಅಧ್ಯಕ್ಷ ಬಿ.ಕೆ.ಮಂಜಪ್ಪ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಾರ್,ಜನರಲ್ ಸ್ಟೋರ್, ಹೊಟೇಲ್ ಗಳು ಸಾಮಾನ್ಯ ಪರವಾನಗಿ ಪಡೆಯದೆ ವಹಿವಾಟು ನಡೆಸುತ್ತಿವೆ.ಪರವಾನಗಿ ಪಡೆಯದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲು ಸಭೆ ಅನುಮೋದಿಸಿತು.
ಖಾಸಗಿ ಅಂಗಡಿ ,ಮಳಿಗೆಗಳ ಮುಂದೆ ವಾಹನ ನಿಲುಗಡೆ ಮಾಡಿದರೆ 500 ರೂ.ದಂಡ ವಿಧಿಸಲು ಹಾಗು ನೆಲಬಾಡಿಗೆ ನಿಗದಿ ಮಾಡುವ ನಿರ್ಣಯವನ್ನು ಸಭೆ ಅಂಗೀಕರಿಸಿತು.
ಉಪಾಧ್ಯಕ್ಷೆ ರೂಪಹರೀಶ್,ಪಿಡಿಒ ಪ್ರತಾಪ್ ಹಾಗು ಸದಸ್ಯರು ಇದ್ದರು.