ಹೊಸದಿಲ್ಲಿ : ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಅಂತಿಮ ಘಟ್ಟ ತಲುಪಿದ್ದು, ಚುನಾವಣೋತ್ತರ ಸಮೀಕ್ಷೆಗಳೆಲ್ಲಾ ತಲೆಕೆಳಗಾಗಿವೆ. ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲ. ೨೯೨ ಕ್ಷೇತ್ರಗಳಲ್ಲಿ ಮುಂದಿರುವ ಎನ್‌ಡಿಎ ಮತ್ತು ೨೩೩ ಕ್ಷೇತ್ರಗಳಲ್ಲಿ ಮುಂದಿರುವ ಇಂಡಿಯಾ ಒಕ್ಕೂಟಗಳು ಸರ್ಕಾರ ರಚನೆಗೆ ಕಸರತ್ತು ನಡೆಸಿವೆ.
ಈ ನಡುವೆ ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಅನಿರಿಕ್ಷಿತ ಮತ್ತು ಅಭೂತಪೂರ್ವ ಗೆಲುವು ಸಾಧಿಸಿರುವ ಚಂದ್ರಬಾಬು ನಾಯ್ಡು ಮತ್ತು ನಿತೀಶ್ ಕುಮಾರ್ ಕಿಂಗ್ ಮೇಕರ್‍ಸ್‌ಗಳಾಗಿ ಹೊರಹೊಮ್ಮಿದ್ದು, ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರ ಟಿಡಿಪಿ-೨೧ ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ೩೨ ಸ್ಥಾನ ಗಳಿಸಿವೆ.