Monday, April 21, 2025
Google search engine

Homeರಾಜ್ಯಕರೋನಾ ಕಾಲದಲ್ಲಿ ಸ್ಥಗಿತವಾಗಿದ್ದ ಸಾರಿಗೆ ಬಸ್’ನ ಎಲ್ಲ ಮಾರ್ಗಗಳು ಶೀಘ್ರ ಪುನಃರಾಂಭ: ರಾಮಲಿಂಗಾರೆಡ್ಡಿ

ಕರೋನಾ ಕಾಲದಲ್ಲಿ ಸ್ಥಗಿತವಾಗಿದ್ದ ಸಾರಿಗೆ ಬಸ್’ನ ಎಲ್ಲ ಮಾರ್ಗಗಳು ಶೀಘ್ರ ಪುನಃರಾಂಭ: ರಾಮಲಿಂಗಾರೆಡ್ಡಿ

ಶಿರಸಿ: ಕರೋನಾ ಕಾಲದಲ್ಲಿ ಅನಿವಾರ‍್ಯವಾಗಿ ಸ್ಥಗಿತವಾಗಿದ್ದ ಸಾರಿಗೆ ಸಂಸ್ಥೆಯ ಬಸ್ಸಿನ ಎಲ್ಲ ಮಾರ್ಗಗಳನ್ನೂ ಶೀಘ್ರ ಪುನಃರಾಂಭ ಮಾಡಲು ತೀರ್ಮಾನಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಅವರು ನಗರದ ಮಾರಿಕಾಂಬಾ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆನಾಡಿದ ಅವರು, ಶಕ್ತಿ ಯೋಜನೆಯ ಪರಿಣಾಮದಿಂದ ಮಹಿಳೆಯರ ಉಚಿತ ಪ್ರವಾಸಕ್ಕೆ ಅನುಕೂಲ ಆಗಿದೆ. ಆದರೆ, ಇದರಿಂದ ಹಲವು ಕಡೆ ಗ್ರಾಮೀಣ ಮಾರ್ಗದಲ್ಲಿ ಶಾಲಾ ಮಕ್ಕಳಿಗೆ ಶಾಲಾ ಸಮಯಕ್ಕೆ ತೆರಳಲು ಸಮಸ್ಯೆ ಆಗುತ್ತಿದೆ. ಇದನ್ನು ಮನಗಂಡ ಸರಕಾರ ನಾಲ್ಕು ವರ್ಷಗಳಿಂದ ಸ್ಥಗಿತವಾಗಿದ್ದ ಹೊಸ ಬಸ್ ಖರೀದಿಗೆ ಮುಂದಾಗಿದೆ. ಈಗಾಗಲೇ ವಾಯುವ್ಯ ಸಾರಿಗೆ ಸಂಸ್ಥೆಗೂ 175 ಬಸ್ಸುಗಳನ್ನು ನೀಡಲಾಗಿದ್ದು, ಶೀಘ್ರ ಇನ್ನೂ 200 ಹೊಸ ಬಸ್ಸು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ. 2016 ರಲ್ಲಿ 14 ಸಾವಿರ ಜನರ ನೇಮಕಾತಿ ಮಾಡಿಕೊಂಡ ಬಳಿಕ ನಂತರ ಆಗಿರಲಿಲ್ಲ. ಈ ಕಾರಣದಿಂದ ಚಾಲಕರು, ನಿರ್ವಾಹಕರ ಕೊರತೆ ಹೋಗಲಾಡಿಸಲು 9000 ಜನರನ್ನು ಹೊರ ಗುತ್ತಿಗೆಯಲ್ಲಿ ನೇಮಕಾತಿಗೆ ಮುಂದಗಿದೆ ಎಂದೂ ಹೇಳಿದರು.

ಸಾರಿಗೆ ಬಸ್ ವ್ಯವಸ್ಥೆ ಲಾಭದಾಯಕ ವ್ಯವಸ್ಥೆ ಅಲ್ಲ. ಶೇ.೪೦ರಷ್ಟು ಬಸ್‌ಗಳು ನಷ್ಟವಾಗುತ್ತವೆ ಎಂಬುದು ಗೊತ್ತಿದ್ದರೂ ಓಡಿಸಲಾಗುತ್ತದೆ. ಶೇ.35 ರಷ್ಟು ಬಸ್ ಯಾವುದೇ ಲಾಭ, ನಷ್ಟವಿಲ್ಲದೇ ಓಡುತ್ತಿವೆ ಎಂದ ರೆಡ್ಡಿ, ಶಕ್ತಿ ಯೋಜನೆ ಬರುವದಕ್ಕಿಂತ ಮೊದಲು 84 ಲಕ್ಷ ಇತ್ತು ನಿತ್ಯ ಪ್ರಯಾಣಿಸುತ್ತಿದ್ದರು. ಆದರೆ, ಈ ಯೋಜನೆಯ ಬಳಿಕ ನಿತ್ಯ 1.10 ಕೋಟಿ ಇದೆ. ಶಕ್ತಿ ಯೋಜನೆಯ ಹಣ ನಿಗಮಗಳಗೆ ಪಾವತಿಸಲು ವಿಳಂಬ ಆದರೂ ನೀಡಲಾಗುತ್ತದೆ. ಬಹುಕಾಲದಿಂದ ನಿಂತಿದ್ದ ನಿವೃತ್ತ ನೌಕರರಿಗೆ ನೀಡ ಬೇಕಾಗಿದ್ದ ಬಾಕಿ ಹಣ 200 ಕೋಟಿ ರೂ. ಈಗ ನಮ್ಮ ಸರಕಾರದಿಂದ ನೀಡಲು ನಿರ್ಧರಿಸಲಾಗಿದೆ. ನಿಗಮ ವ್ಯಾಪ್ತಿಯಲ್ಲಿ 350 ಇಲೆಕ್ಟ್ರಿಕಲ್ ಬಸ್ ಓಡಿಸಲು ಟೆಂಡರ್ ಕರೆದರೂ ಯಾರೂ ಭಾಗವಹಿಸಲಿಲ್ಲ. ಆದರೆ, ಮುಂದೆ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಆರ್ಟಿಒ ಕಚೇರಿ ಸಿಬಂದಿ ಕೊರತೆ ಕೂಡ ನೀಗಿಸಲಾಗುತ್ತದೆ ಎಂದರು.

RELATED ARTICLES
- Advertisment -
Google search engine

Most Popular