Friday, April 4, 2025
Google search engine

Homeರಾಜ್ಯಸುದ್ದಿಜಾಲಅನ್ನಭಾಗ್ಯ ಹೊರೆ ಕಡಿಮೆ ಮಾಡಲು ಬಿಪಿಎಲ್ ಕಾರ್ಡುಗಳ ರದ್ದು ಎಂಬ ಆರೋಪ ಸತ್ಯಕ್ಕೆ ದೂರ: ರಾಜ್ಯ...

ಅನ್ನಭಾಗ್ಯ ಹೊರೆ ಕಡಿಮೆ ಮಾಡಲು ಬಿಪಿಎಲ್ ಕಾರ್ಡುಗಳ ರದ್ದು ಎಂಬ ಆರೋಪ ಸತ್ಯಕ್ಕೆ ದೂರ: ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್

ಮೈಸೂರು: ಬಿಪಿಎಲ್ ಕಾರ್ಡುಗಳ ರದ್ದು ಮಾಡಿ ಅನ್ನಭಾಗ್ಯ ಹೊರೆ ಕಡಿಮೆ ಮಾಡಿಕೊಳ್ಳಲು ಯತ್ನವನ್ನ ಸರ್ಕಾರ ಮಾಡುತ್ತಿದೆ ಎಂಬ ವಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನದ ರಾಜ್ಯ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ತಿಳಿಸಿದರು.

ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪುಷ್ಪ ಅಮರನಾಥ್, ಬಹಳ ಯಶಸ್ವಿಯಾಗಿ ರಾಜ್ಯದಲ್ಲಿ ಗ್ಯಾರಂಟಿ ಅನುಷ್ಠಾನ ಆಗಿದೆ. ಇಡೀ ದೇಶವೇ ನಮ್ಮ‌ ರಾಜ್ಯದತ್ತ ತಿರುಗಿ ನೋಡುವ ಮಟ್ಟಿಗೆ ಯಶಸ್ವಿಯಾಗಿದೆ. ಇಂದು ರಾಜ್ಯದಲ್ಲಿ ಹೆಚ್ಚು ಚರ್ಚೆ ಆಗುತ್ತಿರುವ ವಿಚಾರ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುಗಳ ಕಿತ್ತುಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.

ನಾನು ಮೈಸೂರು ಭಾಗದ 8 ಜಿಲ್ಲೆಗಳ ಉಸ್ತುವಾರಿ ಇದ್ದೇನೆ. ನಮ್ಮ ಮೈಸೂರು ಜಿಲ್ಲೆಯಲ್ಲಿ ಒಟ್ಟು 6,91,370 ಬಿಪಿಎಲ್,ಅಂತ್ಯೋದಯ ಕಾರ್ಡುದಾರರಿದ್ದಾರೆ. ಇದು ಕೇಂದ್ರ ಸರ್ಕಾರದ ಆದೇಶದಂತೆ ಒಂದಷ್ಟು ಪರಿಷ್ಕರಣೆ ಮಾಡಬೇಕೆಂದು ಸರ್ಕಾರ ನಿರ್ಧಾರ ಮಾಡಿದೆ. ಈಗ ನಮ್ಮ ಜಿಲ್ಲೆಯಲ್ಲಿ 4221 ಕಾರ್ಡುಗಳು ಮಾತ್ರ ರದ್ದಾಗಿದೆ. ಅದರಲ್ಲಿ ಏನಾದರೂ ಅರ್ಹ ಫಲಾನುಭವಿಗಳಿಗೆ ತೊಂದರೆಯಾಗಿದ್ದರೆ ಮತ್ತೊಮ್ಮೆ ಅರ್ಜಿ ಹಾಕಿ ಪಡೆಯಬಹುದು. ಮಾನದಂಡದ ವ್ಯಾಪ್ತಿಯಲ್ಲಿ ಅತಾಚುರ್ಯದಿಂದ ಕೈ ಬಿಟ್ಟಿದ್ದರೆ ಮತ್ತೆ ಸೇರಿದಂತೆ ಕೊಳ್ಳಲು ಅವಕಾಶ ಮಾಡಿಕೊಡಲಾಗುತ್ತದೆ. ಯಾರೂ ಕೂಡ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.

ಬಿಪಿಎಲ್ ಕಾರ್ಡುಗಳ ರದ್ದು ಮಾಡಿ ಅನ್ನಭಾಗ್ಯ ಹೊರೆ ಕಡಿಮೆ ಮಾಡಿಕೊಳ್ಳಲು ಯತ್ನವನ್ನ ಸರ್ಕಾರ ಮಾಡುತ್ತಿದೆ ಎಂಬ ವಿಪಕ್ಷಗಳ ಆರೋಪ ಸತ್ಯಕ್ಕೆ ದೂರವಾದದ್ದು. ಇವರು ರಾಜಕೀಯ ಲಾಭಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇನ್ನೂ 10 ಲಕ್ಷ ಜನ ಇದ್ದರೂ ಕೂಡ ಕೊಡಲು ಸರ್ಕಾರ ಸಿದ್ದವಿದೆ. ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ತಕ್ಷಣದಲ್ಲೇ ಬಸವೇಶ್ವರ ಜಯಂತಿಯಂದೇ ಅನ್ನಭಾಗ್ಯವನ್ನ ಘೋಷಣೆ ಮಾಡುತ್ತಾರೆ. ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದೆ ಅಂದ್ರೆ ಅದು ಕಾಂಗ್ರೆಸ್ ಸರ್ಕಾರಗಳು. 20 ಅಂಶಗಳ ಪ್ರಕಾರ ಗರೀಬಿ ಹಠಾವೋ ಕಾರ್ಯಕ್ರಮದೊಂದಿಗೆ ಬಡವರ ಹೊಟ್ಟೆ ತುಂಬಿಸುವ ಕೆಲಸ ಮಾಡಿದೆ. ಕಣ್ತಪ್ಪಿನಿಂದ ಏನಾದರೂ ಸಣ್ಣ ಪುಟ್ಟ ಲೋಪದೋಷಗಳು ಆಗಿದ್ದರೆ, ಅವುಗಳನ್ನ ಸರಿಪಡಿಸುವ ಕೆಲಸ ಮಾಡುತ್ತದೆ. ಅರ್ಹರಿಗೆ ಯಾವುದೇ ಸೌಲಭ್ಯಗಳು ವಂಚಿತರಾಗಲು ಬಿಡುವುದಿಲ್ಲ ಎಂದು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ವತಿಯಿಂದ ನಾನು ಗ್ಯಾರಂಟಿ ಕೊಡುತ್ತೇನೆ ಎಂದು ಪುಷ್ಪಾ ಅಮರನಾಥ್ ಹೇಳಿದರು.

ನಮ್ಮ ನಡಿಗೆ ಗ್ಯಾರಂಟಿ ಅನುಷ್ಠಾನದ ಕಡೆಗೆ ಎಂಬ ಅಭಿಯಾನ ಆರಂಭಿಸಿ ಯಾರಿಗೆ ಬಿಪಿಎಲ್ ಕಾರ್ಡುಗಳಿಂದ ಕೈಬಿಟ್ಟಿದೆ, ಯಾರಿಗೆ ಗೃಹಲಕ್ಷ್ಮಿ ಹಣ ಬರ್ತಾ ಇಲ್ಲ ಎಂಬ ಎಲ್ಲಾ ಬಡವರ ಸಮಸ್ಯೆಗಳನ್ನು ಹತ್ತಿರದಿಂದ ಅರಿಯಲು ರೂಪರೇಖೆಗಳನ್ನ ತಯಾರಿ ಮಾಡುತ್ತಿದ್ದೇವೆ. ಬಡವರು ಹೆಚ್ಚು ವಾಸಿಸುವ ಕೊಳಚೆ ಪ್ರದೇಶಗಳು, ಬಡವರ ಬಡಾವಣೆಗಳಿಗೆ ಹೋಗಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇವೆ. ಬಿಪಿಎಲ್ ಇಂದ ಎಪಿಎಲ್ ಗೆ ಬದಲಾವಣೆ ಮಾಡಿದ್ರೆ ಗೃಹಲಕ್ಷ್ಮಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಎಪಿಎಲ್ ಕುಟುಂಬದ ಯಜಮಾನಿಗೂ ಎರಡು ಸಾವಿರ ಬರುತ್ತದೆ. ಯಾರೂ ಆತಂಕಪಡಬೇಕಾಗಿಲ್ಲ. ಇದನ್ನೆಲ್ಲ ಪರಿಶೀಲನೆ ಮಾಡಲು ಈಗಾಗಲೇ ಅಂಗನವಾಡಿ, ಆಶಾ ಕಾರ್ಡುದಾರರ ಪರಿಶೀಲನೆ ಮಾಡಿಸುತ್ತೇವೆ. ಜಿಲ್ಲೆಯ ಪ್ರತಿ ತಾಲ್ಲೂಕುವಾರು ಗ್ಯಾರಂಟಿ ಅದಾಲತ್ ಮಾಡುತ್ತೇವೆ. 15 ದಿನಗಳಲ್ಲಿ ಗ್ಯಾರಂಟಿ ಅದಾಲತ್ ಮಾಡುತ್ತೇವೆ. ಯಾರಿಗಾದರೂ ಗ್ಯಾರಂಟಿ ಸರಿಯಾಗಿ ತಲುಪಿಲ್ಲದಿದ್ದರೆ ಅರ್ಹರಿಗೆ ಸೌಲಭ್ಯ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಪುಷ್ಪಾ ಅಮರನಾಥ್ ತಿಳಿಸಿದರು.

RELATED ARTICLES
- Advertisment -
Google search engine

Most Popular