ತನಿಖೆ ನಡೆಸುವಂತೆ ಅಬಕಾರಿ ಆಯುಕ್ತರಿಗೆ ಡಿಸಿ ಕುಮಾರ ಸೂಚನೆ
ಮಂಡ್ಯ: ಮಂಡ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಯಿಂದ ಕಮಿಷನ್ ದಂಧೆ ನಡೆಯುತ್ತಿದ್ದು, ಅಬಕಾರಿ ಇಲಾಖೆಯ ಕಮಿಷನ್ ದಂಧೆಯ ರೇಟ್ ಲಿಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರೋದು ತಿಳಿದು ಬಂದಿದೆ. ಮದ್ದೂರು ತಾಲೂಕಿನ ವೈನ್ ಸ್ಟೋರ್ ಗಳಿಂದ ಲಂಚ ವಸೂಲು ಮಾಡಲು ರೇಟ್ ಲಿಸ್ಟ್ ಸಿದ್ಧಪಡಿಸಿದ್ದು ,ತಾಲೂಕು ಅಬಕಾರಿ ನಿರೀಕ್ಷಕರ ಹೆಸರಲ್ಲಿ ಪ್ರತಿ ಬಾರ್ ಗಳಿಂದ ವಸೂಲಿಗೆ ರೇಟ್ ಲಿಸ್ಟ್ ಫಿಕ್ಸ್ ಆಗಿದ್ದು, ಈ ವೈರಲ್ ರೇಟ್ ಲಿಸ್ಟ್ ಬಗ್ಗೆ ತನಿಖೆ ನಡೆಸುವಂತೆ ಆರ್ ಟಿ ಐ ಕಾರ್ಯಕರ್ತನಿಂದ ಅಬಕಾರಿ ಅಧೀಕ್ಷಕರಿಗೆ ದೂರು ಸಲ್ಲಿಸಲಾಗಿದೆ .

ಇತ್ತೀಚೆಗೆ ಮದ್ದೂರಿನಲ್ಲಿ ನಡೆದ ಜನತಾದರ್ಶನದಲ್ಲಿ ಈ ಬಗ್ಗೆ ಡಿಸಿಗೆ ದೂರು ಸಲ್ಲಿಸಿದ್ದು ,ಈ ವೈರಲ್ ರೇಟ್ ಲಿಸ್ಟ್ ಬಗ್ಗೆ ತನಿಖೆ ನಡೆಸುವಂತೆ ಅಬಕಾರಿ ಆಯುಕ್ತರಿಗೆ ಡಿ. ಸಿ ಕುಮಾರ ಸೂಚನೆ ನೀಡಿದ್ದಾರೆ, ಅದಲ್ಲದೆ ತಾಲೂಕಿನ ಪ್ರತಿ ಬಾರ್ ಗೂ ಒಂದೊಂದು ರೇಟ್ ಲಿಸ್ಟ್ ಚಾಟ್ ಮಾಡಲಾಗಿದ್ದು, ವೈರಲ್ ಆಗಿರುವ ರೇಟ್ ಲಿಸ್ಟ್ ಚಾರ್ಟ್ ನಲ್ಲಿ ತಾಲೂಕು ಅಬಕಾರಿ ನಿರೀಕ್ಷಕ ಪ್ರೇಮ್ ಸಾಗರ್ ಸಹಿ ಹಾಗೂ ಕಚೇರಿ ಸೀಲು ಇರುವುದು ಕಂಡುಬಂದಿದ್ದು, ಈ ಲಂಚ ಕೊಡದಿದ್ದರೆ ಬಾರ್ ಲೈಸೆನ್ಸ್ ರದ್ದುಪಡಿಸುವುದಾಗಿ ಬಾರ್ ಮಾಲೀಕರಿಗೆ ಎಚ್ಚರಿಕೆ ಕೊಟ್ಟಿರುವ ಆರೋಪವು ಕೇಳಿ ಬಂದಿದೆ. ಆದರೆ ಈ ಸಹಿ ತಮ್ಮದಲ್ಲ ಫೋರ್ಜರಿ ಎಂದು ಅಬಕಾರಿ ನಿರೀಕ್ಷಕ ಪ್ರೇಮ ಸಾಗರ್ ನೀಡಿರುವ ಹೇಳಿಕೆ ಈಗ ಜಿಲ್ಲೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
