ಮಂಡ್ಯ: ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತು ಹಿನ್ನಲೆ ಮಂಡ್ಯ PWD A.E ಹರ್ಷ ಅವರನ್ನು ಸೇವೆಯಿಂದ ಅಮಾನತ್ತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಲೋಕಪಯೋಗಿ ಇಲಾಖೆಯ ಮುರುಳಿಧರ್ ತಳ್ಳೀಕೆರೆ ಅಮಾನತು ಮಾಡಿದ್ದು, ಇಲಾಖೆ ವಿಚಾರಣೆಗೆ ಬಾಕಿ ಇರಿಸಿ ಆದೇಶ ಹೊರಡಿಸಿದ್ದಾರೆ

ಅಲ್ಲದೆ ಅಕ್ರಮ ಭ್ರಷ್ಟಾಚಾರದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ಕೂಡ ದಾಳಿ ನಡೆದಿತ್ತು. ದಾಳಿಯ ವೇಳೆ ಭ್ರಷ್ಟ ಅಧಿಕಾರಿಯು ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿರುವುದು ತಿಳಿದುಬಂದಿದ್ದು, ಅಕ್ರಮ ಆಸ್ತಿ ಗಳಿಕೆ ಸಾಬೀತಾಗಿತ್ತು.
ಈ ಹಿನ್ನಲೆ ಅಧಿಕಾರಿ ಕ್ರಿಮಿನಲ್ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದರು.