Saturday, April 12, 2025
Google search engine

Homeಅಪರಾಧಧರ್ಮಸ್ಥಳ ಸಂಸ್ಥೆಯಲ್ಲಿ ಅಕ್ರಮ ಬಡ್ಡಿ ದಂಧೆ ಆರೋಪ: ಅಗತ್ಯ ಕ್ರಮ ಕೈಗೊಳ್ಳಲು DG&IGP ಸೂಚನೆ

ಧರ್ಮಸ್ಥಳ ಸಂಸ್ಥೆಯಲ್ಲಿ ಅಕ್ರಮ ಬಡ್ಡಿ ದಂಧೆ ಆರೋಪ: ಅಗತ್ಯ ಕ್ರಮ ಕೈಗೊಳ್ಳಲು DG&IGP ಸೂಚನೆ

ಮೈಸೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಂಸ್ಥೆಯಲ್ಲಿ ಅಕ್ರಮ ಬಡ್ಡಿ ವ್ಯವಹಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ದಾಖಲೆ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪೋಲೀಸ್ ಕಮಿಷನರ್ ಕಚೇರಿ, ಎಸ್ಪಿ ಕಚೇರಿಗೆ ರಾಜ್ಯ ಪೋಲಿಸ್ ಮಹಾ ನಿರ್ದೇಶಕರು ಸೂಚನೆ ನೀಡಿದ್ದಾರೆ.

ಈ ಕುರಿತು ರಾಜ್ಯದ ಎಲ್ಲಾ ಪೋಲೀಸ್ ಕಮಿಷನರ್ ಕಚೇರಿ, ಎಸ್ಪಿ ಕಚೇರಿಗೆ ಪತ್ರ ರವಾನೆ ಮಾಡಲಾಗಿದೆ. ಜನರ ಬಳಿ ಹೆಚ್ಚಿನದಾಗಿ ಬಡ್ಡಿ ಪೀಕಿಸುತ್ತಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಸಂಸ್ಥೆಯ ವಿರುದ್ಧ ನ್ಯಾಯಾಲಯ ಕ್ರಮಕ್ಕೆ ಮುಂದಾಗಿದ್ದು, ದಾಖಲೆಗಳನ್ನ ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಆದೇಶಿಸಿದೆ.

ಈ ಹಿನ್ನೆಲೆ ದಾಖಲೆಗಳನ್ನ ಪರಿಶೀಲಿಸುವಂತೆ ರಾಜ್ಯದ ಎಲ್ಲಾ ಪೋಲೀಸ್ ಕಮಿಷನರ್ ಕಚೇರಿ,ಎಸ್ಪಿ ಕಚೇರಿಗೆ ಪೋಲಿಸ್ ಮಹಾ ನಿರ್ದೇಶಕರ ಕಚೇರಿಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಎಲ್ಲಾ ಪೊಲೀಸ್ ಠಾಣೆಗಳಿಗೆ ಈ ಕುರಿತಂತೆ ಮಾಹಿತಿ ರವಾನಿಸಿ ಅಗತ್ಯ ಕಾನೂನು ಕ್ರಮ ಜರುಗಿಸುವಂತೆ ಪತ್ರದಲ್ಲಿ ಸೂಚನೆ ನೀಡಲಾಗಿದೆ.

RELATED ARTICLES
- Advertisment -
Google search engine

Most Popular