Monday, April 21, 2025
Google search engine

Homeರಾಜ್ಯಮಹಿಳಾ ಅಧಿಕಾರಿಗೆ ನಿಂದನೆ ಆರೋಪ : ಶಾಸಕರ ಪುತ್ರ ಬೆದರಿಕೆ ಹಾಕಿದ್ದು ನಿಜವಾದರೆ ಕಠಿಣ ಕ್ರಮ...

ಮಹಿಳಾ ಅಧಿಕಾರಿಗೆ ನಿಂದನೆ ಆರೋಪ : ಶಾಸಕರ ಪುತ್ರ ಬೆದರಿಕೆ ಹಾಕಿದ್ದು ನಿಜವಾದರೆ ಕಠಿಣ ಕ್ರಮ ಸಚಿವ ಜ ಜಿ.ಪರಮೇಶ್ವರ್

ಬೆಂಗಳೂರು : ಶಿವಮೊಗ್ಗ ಜಲಿಯಲ್ಲಿ ನಿನ್ನೆ ಆ ಮರಳು ಮಾಫಿಯಾ ಘಟನಾ ಸ್ಥಳಕ್ಕೆ ತೆರಳಿದ ವೇಳೆ ಗಣಿ ಮತ್ತು ಮಗುವಿಜ್ಞಾನ ಇಲಾಖೆ ಮೇಳಾಧಿಕಾರಿಗೆ ಶಾಸಕ ಸಂಗಮೇಶ್ ಪುತ್ರ ಬಸವೇಶ್ ಬೆದರಿಕೆ ಹಾಗೂ ಅವಾಚೆ ಪದಗಳಿಂದ ನಿಂದನೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನ ಸಚಿವ ಜಿ ಪರಮೇಶ್ವರ್ ಮಹಿಳಾಧಿಕಾರಿಗೆ ಸಂಗಮೇಶ್ ಪುತ್ರ ಬೆದರಿಕೆ ಹಾಕಿದ್ದು ನಿಜವಾದರೆ ಬಸವೇಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಪ್ರಕರಣ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಿಳಾ ಅಧಿಕಾರಿಗೆ ಸಂಗಮೇಶ್ ಪುತ್ರನಿಂದ ನಿಂದನೆ ಆರೋಪದ ಕುರಿತಾಗಿ ಸಂಗಮೇಶ್ ಪುತ್ರ ಬೆದರಿಕೆ ಹಾಕಿರುವುದು ಗೊತ್ತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ಆಗಿದೆ ಎಂದರು.

ಆದಷ್ಟು ಬೇಗ ಪ್ರಕರಣದ ತನಿಖೆಯ ವರದಿ ಬರಲಿದೆ ವರದಿಯ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ ಉದಯಗಿರಿ ಠಾಣೆ ಕೇಸ್ ವಿಚಾರವಾಗಿಯೂ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ನಮಗೆ ಸಿಕ್ಕಿರುವಂತಹ ವಿಡಿಯೋವನ್ನು ಆಧರಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಇನ್ನು ಬಿಜೆಪಿ ಸರ್ಕಾರ ಇದ್ದಾಗ ಯಾವುದೇ ಕೇಸ್ ಆಗಿಲ್ವಾ? ಎಂದು ಇದೆ ವೇಳೆ ಗೃಹ ಸಚಿವ ಪರಮೇಶ್ವರ್ ಗರಂ ಆದರು.

RELATED ARTICLES
- Advertisment -
Google search engine

Most Popular