Tuesday, January 13, 2026
Google search engine

Homeರಾಜಕೀಯಆಧಾರರಹಿತ ಹೇಳಿಕೆ ಆರೋಪ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ದೂರು

ಆಧಾರರಹಿತ ಹೇಳಿಕೆ ಆರೋಪ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ದೂರು

ಬೆಂಗಳೂರು : ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಸುಳ್ಳು ಹೇಳಿಕೆಗಳನ್ನು ನೀಡಿ ಅದನ್ನು ಪ್ರಚಾರಪಡಿಸಿ ತಪ್ಪು ಮಾಹಿತಿ ಮೂಲಕ ಸಾರ್ವಜನಿಕರಲ್ಲಿ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುತ್ತಿರುವ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಕ್ರಮಕೈಗೊಳ್ಳುವಂತೆ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಬೆಂಗಳೂರು ಡಿಜಿಪಿ ಡಾ.ಎಂ.ಎ.ಸಲೀಂ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಅವರು 08.01.2026 ರಂದು ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ಅವರು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ “ಕೇಂದ್ರ ಸಚಿವ ಅಮಿತ್ ಷಾ ಅವರ ಚಿತಾವಣೆಯಿಂದ ಬಳ್ಳಾರಿಯಲ್ಲಿ ಗಲಾಟೆ ನಡೆದು ಕಾಂಗ್ರೆಸ್ ಕಾರ್ಯಕರ್ತರ ಹೆಣ ಬಿದ್ದಿದೆ, ಅಮಿತ್ ಶಾ ಅವರ ಸಂದೇಶ ಹೊತ್ತು ತಂದ ಕೇಂದ್ರ ಸಚಿವ ವಿ. ಸೋಮಣ್ಣ ಅವರನ್ನು ಬ್ರೈನ್ ಮ್ಯಾಪಿಂಗ್‌ ಗೆ ಒಳಪಡಿಸಿದರೆ ಷಡ್ಯಂತ್ರ ಬಯಲಾಗಲಿದೆ, ವಿ. ಸೋಮಣ್ಣ ಅವರು ಬಳ್ಳಾರಿಗೆ ಭೇಟಿ ನೀಡಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜೊತೆ ಚರ್ಚೆ ನಡೆಸಿದ ನಂತರ ಗಲಾಟೆಯಾಗಿದೆ, ಕೆಲಸಕ್ಕೆ ಬಾರದ ಮಾತಾಡಿಕೊಂಡು ಪ್ರೆಸ್ ಮೀಟ್ ಮಾಡಿಕೊಂಡಿದ್ದರೆ ಯಾವುದೇ ಪ್ರಯೋಜನವಿಲ್ಲ, ಒಂದು ಹೆಣ ಬೀಳಿಸಿ ರಾಜಕಾರಣ ಮಾಡಿ ಎಂದು ಅಮಿತ್ ಶಾ ಅವರ ಸಂದೇಶವನ್ನು ವಿ. ಸೋಮಣ್ಣ ಅವರು ಜನಾರ್ದನ್ ರೆಡ್ಡಿ ಹಾಗೂ ಶ್ರೀರಾಮುಲುಗೆ ತಲುಪಿಸಿದ್ದಾರೆ” ಎಂಬಿತ್ಯಾದಿ ಗಂಭೀರ ಆರೋಪಗಳನ್ನು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದಾರೆ.

ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ತಮ್ಮ ಹೇಳಿಕೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿ, “ಹೆಣ ಬೀಳಬೇಕು, ಅದರ ಮೇಲೆ ರಾಜಕೀಯ ಮಾಡಬೇಕು” ಎಂಬ ಅತ್ಯಂತ ಗಂಭೀರ ಮತ್ತು ಪ್ರಚೋದನಾತ್ಮಕ ಪದಗಳನ್ನು ಯಾವುದೇ ದಾಖಲೆ, ಪುರಾವೆ ಅಥವಾ ಯುಕ್ತವಾದ ಆಧಾರ ಇಲ್ಲದೇ ನೀಡಿರುವುದು ಅತ್ಯಂತ ಗಂಭೀರವಾದ ಸಂಗತಿಯಾಗಿದೆ.

ಈ ರೀತಿಯ ಸುಳ್ಳು ಹೇಳಿಕೆಗಳು ಸಾರ್ವಜನಿಕರಲ್ಲಿ ಭಯ, ಆತಂಕ ಮತ್ತು ಅಶಾಂತಿ ಉಂಟುಮಾಡುವಂತಹದ್ದಾಗಿವೆ. ಆಡಳಿತ ಪಕ್ಷದ ಅಧಿಕೃತ ವಕ್ತಾರರು ಕೇಂದ್ರ ಸಚಿವರ ವಿರುದ್ಧಸುಳ್ಳು ಆರೋಪಗಳನ್ನು ಹರಡಿ ಜನರನ್ನು ಪುಚೋದಿಸುವುದು ಖಂಡನೀಯ.
ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಅವರು ಸಾರ್ವಜನಿಕರಿಗೆ ಮತ್ತು ಹಲವು ಮಾಧ್ಯಮದವರಿಗೆ ಪದೇ ಪದೇ ಬುಡವಿಲ್ಲದ ಆರೋಪ ಮಾಡುವುದು, ಅವಾಚ್ಯ ಶಬ್ದ ಬಳಸುವುದು ಮತ್ತು ತಪ್ಪು ಮಾಹಿತಿ ನೀಡುವುದು ಮಾಡುತ್ತಲ್ಲೇ ಇದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವುದೆಂದು ಅವರು ತಮ್ಮ ನಾಲಿಗೆಯನ್ನು ಹಿಡಿತವಿಲ್ಲದೆ ಹರಿಯ ಬಿಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇವರ ಮೇಲೆ ಈಗಾಗಲೇ ಹಲವಾರು ಮಾನನಷ್ಟ ಮೊಕದ್ದಮೆಗಳು ದಾಖಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆಯು ನಡೆಯುತ್ತಿದೆ. ಆದರೂ ಸಹಾ ತನ್ನ ನಾಲಿಗೆಯ ಮೇಲೆ ನಿಯಂತ್ರಣ ಸಾಧಿಸಿಲ್ಲ.

ಎಂ. ಲಕ್ಷ್ಮಣ್ ರವರು ಎಸಗಿರುವ ಕೃತ್ಯವು ಗಂಭೀರ ಸ್ವರೂಪದ ಕ್ರಿಮಿನಲ್ ಪ್ರಕರಣವಾಗಿದ್ದು ಭಾರತೀಯ ನ್ಯಾಯ ಸಂಹಿತ- 2023 ರ ಕಾಲಂ 125,351 ಹಾಗೂ 353ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ. ಆದ ಕಾರಣ ಸುಳ್ಳು ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಕೆ.ಪಿ.ಸಿ.ಸಿ ವಕ್ತಾರ ಎಂ. ಲಕ್ಷ್ಮಣ್ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular