ನವದೆಹಲಿ: ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಮೂರನೇ ಇನ್ವಿಂಗ್ಸ್ ಆರಂಭಿಸಿದ ಬೆನ್ನಲ್ಲೇ ಇಂದು ಸೋಮವಾರ ನೂತನ ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಮೋದಿಯವರ ಜತೆ ನೂತನ ಸರ್ಕಾರದ 71 ಸಚಿವರು ಕೂಡಾ ಪ್ರಮಾಣ ಸ್ವೀಕರಿಸಿದ್ದು, ಈ 71 ಸಚಿವರ ಪೈಕಿ 30 ಕ್ಯಾಬಿನೆಟ್ ಮಂತ್ರಿಗಳಾಗಿ, 5 ಸ್ವತಂತ್ರ ಉಸ್ತುವಾರಿ ಹೊಂದಿರುವ ರಾಜ್ಯ ಮಂತ್ರಿಗಳಾಗಿ ಮತ್ತು 36 ರಾಜ್ಯ ಸಚಿವರಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡರು.
ಯಾರಿಗೆ ಯಾವ ಖಾತೆ? ಸಂಪೂರ್ಣ ಪಟ್ಟಿ ಇಲ್ಲಿದೆ……..
- ಅಮಿತ್ ಶಾ: ಗೃಹ ಖಾತೆ
- ನಿತಿನ್ ಗಡ್ಕರಿ: ರಸ್ತೆ ಸಾರಿಗೆ ಮತ್ತು ಹೆದ್ದಾರಿ
- ರಾಜ್ ನಾಥ್ ಸಿಂಗ್: ರಕ್ಷಣಾ ಇಲಾಖೆ
- ಜೈಶಂಕರ್: ವಿದೇಶಾಂಗ ವ್ಯವಹಾರಗಳ ಖಾತೆ
- ಮನೋಹರ್ ಲಾಲ್ ಖಟ್ಟರ್: ವಿದ್ಯುತ್ ಮತ್ತು ನಗರ ವ್ಯವಹಾರ
- ಜೆಪಿ ನಡ್ಡಾ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
- ಅಶ್ವಿನಿ ವೈಷ್ಣವ್: ಮಾಹಿತಿ ಮತ್ತು ಪ್ರಸಾರ ಖಾತೆ
- ಶಿವರಾಜ್ ಸಿಂಗ್ ಚೌಹಾಣ್: ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ಪಂಚಾಯತ್ ರಾಜ್ ಸಚಿವಾಲಯ
- ಮನ್ಸುಖ್ ಮಾಂಡವಿಯಾ:ಕಾರ್ಮಿಕ ಮತ್ತು ಕ್ರೀಡೆ
- ಜಿತನ್ ರಾಮ್ ಮಾಂಝಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ
- ನಿರ್ಮಲಾ ಸೀತಾರಾಮನ್: ಹಣಕಾಸು ಇಲಾಖೆ
- ಚಿರಾಗ್ ಪಾಸ್ವಾನ್: ಕ್ರೀಡೆ ಮತ್ತು ಯುವ ಸಚಿವಾಲಯ, ಆಹಾರ ಸಂಸ್ಕರಣೆಯ ಹೆಚ್ಚುವರಿ ಉಸ್ತುವಾರಿ
- ಶ್ರೀಪಾದ್ ನಾಯಕ್ : ವಿದ್ಯುತ್ ಖಾತೆಯ ನೂತನ ರಾಜ್ಯ ಸಚಿವ
- ಕಿಂಜರಾಪು ರಾಮ್ ಮೋಹನ್ ನಾಯ್ಡು: ನಾಗರಿಕ ವಿಮಾನಯಾನ
- ಪಿಯೂಷ್ ಗೋಯಲ್: ವಾಣಿಜ್ಯ ಸಚಿವಾಲಯ
- ಹರ್ಷ್ ಮಲ್ಹೋತ್ರಾ: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ
- ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
- ಧರ್ಮೇಂದ್ರ ಪ್ರಧಾನ್ -ಶಿಕ್ಷಣ ಸಚಿವಾಲಯ
- ಭೂಪೇಂದ್ರ ಯಾದವ್-ಪರಿಸರ ಇಲಾಖೆ
- ರಾಮ್ ಮೋಹನ್ ಯಾದವ್- ನಾಗರಿಕ ವಿಮಾನಯಾನ ಸಚಿವಾಲಯ
- ಕಿರಣ್ ರಿಜಿಜು-ಸಂಸದೀಯ ವ್ಯವಹಾರಗಳು
- MSME – ಜಿತನ್ ರಾಮ್ ಮಾಂಝಿ-MSME
- ಪ್ರಲ್ಹಾದ್ ಜೋಶಿ-ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಹೊಸ ಮತ್ತು ನವೀಕರಿಸಬಹುದಾದ ಇಂಧನ
- ಹೆಚ್ ಡಿ ಕುಮಾರಸ್ವಾಮಿ- ಉಕ್ಕು ಮತ್ತು ಬೃಹತ್ ಕೈಗಾರಿಕೆ
- ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣಾ ಉದ್ಯಮ
- ಪ್ರಹ್ಲಾದ ಜೋಶಿ – ಆಹಾರ ಮತ್ತು ನಾಗರೀಕ ಇಲಾಖೆ
- ಸಿ ಆರ್ ಪಾಟೀಲ್ – ಜಲ ಶಕ್ತಿ
- ಗಜೇಂದ್ರ ಸಿಂಗ್ ಶೇಖಾವತ್ -ಸಂಸ್ಕೃತಿ ಮತ್ತು ಪ್ರವಾಸ
- ಶೋಭಾ ಕರಂದ್ಲಾಜೆ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ
- ಲಾಲನ್ ಸಿಂಗ್ -ಹೈನುಗಾರಿಕೆ