ಧಾರವಾಡ : ಲೋಕಸಭೆ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಧಾರವಾಡ ಲೋಕಸಭೆ ಮತಕ್ಷೇತ್ರಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ಚುನಾವಣಾ ಆಯೋಗದ ನಿಯಮಗಳ ಅನ್ವಯ ಚಿಹ್ನೆ ಹಂಚಿಕೆ ಮಾಡಿದ್ದಾರೆ.
ಮಾನ್ಯತೆ ಪಡೆದ ರಾಷ್ಟ್ರೀಯ ರಾಜಕೀಯ ಪಕ್ಷಗಳಾದ ಭಾರತಿಯ ಜನತಾ ಪಾರ್ಟಿಯ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರಿಗೆ ಕಮಲ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿನೋದ ಅಸೂಟಿ ಅವರಿಗೆ ಕೈ ಚಿಹ್ನೆ ನೀಡಲಾಗಿದೆ.
ಅದರಂತೆ ನೊಂದಾಯಿತ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಾದ ನಾಕಿ ಭಾರತೀಯ ಏಕತಾ ಪಾರ್ಟಿಯ ಅಭ್ಯರ್ಥಿ ಜಾವೀದ ಆಹ್ಮದ ಬೆಳಗಾವಂಕರ ಅವರಿಗೆ ಸೀಟಿ(ವ್ಹಿಸಿಲ್), ಪ್ರಹಾರ ಜನಶಕ್ತಿ ಪಾರ್ಟಿಯ ಅಭ್ಯರ್ಥಿ ಟಾಕಪ್ಪ ಯಲ್ಲಪ್ಪ ಕಲಾಲ ಅವರಿಗೆ ಕಬ್ಬು ರೈತ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ನಾಗರಾಜ ಕರೆಣ್ಣವರ ಅವರಿಗೆ ಬ್ಯಾಟರಿ ಟಾರ್ಚ್, ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿ ಬುಗಡಿ ಬಸವಲಿಂಗಪ್ಪ ಈರಪ್ಪ ಅವರಿಗೆ ಆಟೋ – ರಿಕ್ಷಾ, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದ ಅಭ್ಯರ್ಥಿ ಮಹ್ಮಮದ ಇಸ್ಮಾಯಿಲ್ ಮುಕ್ತಿ ಅವರಿಗೆ ಬ್ಯಾಟ್, ಪ್ರೌಟೀಸ್ಟ್ ಬ್ಲಾಕ್ ಇಂಡಿಯಾ ಪಕ್ಷದ ಅಭ್ಯರ್ಥಿ ವಿನೋದ ದಶರಥ ಘೋಡಕೆ ಅವರಿಗೆ ಹಡಗು, ಇಂಡಿಯನ್ ಲೇಬರ್ ಪಾರ್ಟಿ (ಅಂಬೇಡ್ಕರ್ ಪುಲೆ) ಪಕ್ಷದ ಅಭ್ಯರ್ಥಿ ವೆಂಕಟೇಶ್ ಪ್ರಸಾದ್ ಎಚ್, ಅವರಿಗೆ ಪೆಟ್ಟಿಗೆ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಶರಣಬಸವ ಗೋನವಾರ ಅವರಿಗೆ ಗಾಜಿನ ಲೋಟ, ಟಿಪು ಸುಲ್ತಾನ ಪಾರ್ಟಿಯ ಅಭ್ಯರ್ಥಿ ಬಂಕಾಪೂರ ಶೌಖತಅಲಿ ಅವರಿಗೆ ಇಟ್ಟಿಗೆಯ ಚಿಹ್ನೆಗಳನ್ನು ನೀಡಲಾಗಿದೆ.
ಪಕ್ಷೇತರ ಅಭ್ಯರ್ಥಿಗಳಾದ ಡಾ.ಗುರಪ್ಪ ಹೆಚ್ ಇಮ್ರಾಪೂರ ಅವರಿಗೆ ಹಲಸಿನ ಹಣ್ಣು, ಪಕ್ಷೇತರ ಅಭ್ಯರ್ಥಿ ಪ್ರವೀಣ್. ಹ. ಹತ್ತೆನವರ ಅವರಿಗೆ ಸಿತಾರ್, ಬಾಲನಗೌಡ್ರ ಮಲ್ಲಿಕಾರ್ಜುನಗೌಡ ಅವರಿಗೆ ಟಿಲ್ಲರ್, ರಾಜು ಅನಂತಸಾ ನಾಯಕವಾಡಿ ಅವರಿಗೆ ಕೈಗಾಡಿ, ಶಕೀಲ ಅಹ್ಮದ ಡಿ ಮುಲ್ಲಾ ಅವರಿಗೆ ಹಣ್ಣುಗಳು ಇರುವ ಬ್ಯಾಸ್ಕೆಟ್, ಎಸ್.ಎಸ್. ಪಾಟಿಲ್ ಅವರಿಗೆ ಏಳು ಕಿರಣಗಳು ಇರುವ ಪೆನ್ನಿನ ನಿಬ್ ಚಿಹ್ನೆಗಳನ್ನು ಹಂಚಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದರು