ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಬುಧವಾರ) ವಿಮಾನ ದುರಂತ ತಪ್ಪಿದೆ. ಏಕಕಾಲಕ್ಕೆ ಒಂದೇ ರನ್ವೇಯಲ್ಲಿ ವಿಸ್ತಾರ ವಿಮಾನಯಾನ ಸಂಸ್ಥೆಯ ಎರಡು ವಿಮಾನಗಳಿಗೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೆ ಅವಕಾಶ ನೀಡಲಾಗಿದ್ದು, ಸುದೈವವಶಾತ್ ವಿಮಾನಗಳ ನಡುವಿನ ಸಂಭವನೀಯ ಅಪಘಾತ ತಪ್ಪಿದೆ. ಈ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.
ಗುಜರಾತ್ನ ಅಹಮದಾಬಾದ್ನಿಂದ ದೆಹಲಿಗೆ ಬಂದ ಒಂದು ವಿಮಾನ ಲ್ಯಾಂಡ್ ಆಗಬೇಕಿತ್ತು. ಮತ್ತೊಂದು ವಿಮಾನ ದೆಹಲಿಯಿಂದ ಪಶ್ಚಿಮ ಬಂಗಾಳದ ಬಗದೋರ್ಗಾಕ್ಕೆ ಟೇಕ್ ಆಫ್ ಮಾಡಬೇಕಿತ್ತು. ಈ ಎರಡೂ ವಿಮಾನಗಳಿಗೆ ಒಂದೇ ಸಮಯಕ್ಕೆ ಒಂದೇ ರನ್ ವೇ ಮೇಲೆ ಟೇಕ್‌ಆಫ್ ಹಾಗೂ ಲ್ಯಾಂಡಿಂಗ್‌ಗೆ ಏರ್ ಟ್ರಾಫಿಕ್ ಕಂಟ್ರೋಲರ್ನಿಂದ(ಎಟಿಸಿ) ಅವಕಾಶ ನೀಡಲಾಗಿದೆ. ಟ್ರಾಫಿಕ್ ಕಂಟ್ರೋಲರ್ ಅಜಾಗರೂಕತೆಯಿಂದ ಎರಡು ವಿಮಾನಗಳು ಏಕಾಕಾಲಕ್ಕೆ ಕಾರ್ಯಾಚರಣೆ ಮಾಡಿದ್ದರೆ ಭಾರಿ ದುರಂತ ಸಂಭವಿಸುವ ಸಾಧ್ಯತೆ ಇತ್ತು