ಬೆಂಗಳೂರು, ಜುಲೈ 16: ಇನ್ನು ಮುಂದೆ ಸಿವಿಲ್ ಪೊಲೀಸ್ ಠಾಣೆಗಳಲ್ಲಿಯೂ ಸೈಬರ್ ಕ್ರೈಂಗೆ ಸಂಬಂಧಿಸಿದಂತೆ ದೂರು ನೀಡಬಹುದಾಗಿದೆ.
ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರು ಆದೇಶ ಹೊರಡಿಸಿದ್ದಾರೆ.
ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇನ್ಮುಂದೆ ಈ ಕುರಿತ ಸೈಬರ್ ಅಪರಾಧಗಳ ದೂರುಗಳನ್ನು ನಾಗರಿಗ ಪೊಲೀಸ್ ಠಾಣೆಗಳಲ್ಲೂ ನೀಡಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ತಿಳಿಸಿದ್ದಾರೆ.
ಈ ಮೊದಲು ಡಿಸಿಪಿ ಮತ್ತು ಎಸ್ ಪಿ ಮಟ್ಟದಲ್ಲಿ ತೆರೆಯಲಾಗಿದ್ದ ಸೈಬರ್, ಆರ್ಥಿಕ, ನಾರ್ಕೋಟಿಕ್ ಠಾಣೆಗಳಲ್ಲಿ ಅಷ್ಟೇ ದೂರು ದಾಖಲಿಸಲು ಅವಕಾಶ ಇತ್ತು.