Tuesday, January 27, 2026
Google search engine

Homeರಾಜ್ಯಸುದ್ದಿಜಾಲಶಿಕ್ಷಣದ ಜೊತೆಗೆ ಕ್ರೀಡೆ–ಕಲೆಗೂ ಸಮಾನ ಮಹತ್ವ: ಶಾಸಕ ಡಿ.ರವಿಶಂಕರ್

ಶಿಕ್ಷಣದ ಜೊತೆಗೆ ಕ್ರೀಡೆ–ಕಲೆಗೂ ಸಮಾನ ಮಹತ್ವ: ಶಾಸಕ ಡಿ.ರವಿಶಂಕರ್

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಇಂದು ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೆ, ಕ್ರೀಡಾ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳು ಬೆಳವಣಿಗೆಯಾಗ ಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಶಾಸಕ.ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ೨೦೨೫-೨೬ ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾಲೇಜಿಗೆ ಶೌಚಾಲಯ, ಐದು ಕೊಠಡಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅತಿ ಶೀಘ್ರದಲ್ಲಿ ಕಾಂಪೌoಡ್ ನಿರ್ಮಾಣ ಮಾಡಿಸಿ ಕೊಡಲಾಗುವುದು, ಅಲ್ಲದೇ ಕಾಲೇಜು ಆವರಣದಲ್ಲಿ ಎಲ್ಲಾ ಕಾಲೇಜುಗಳು ಒಳಗೊಂಡoತೆ ಬೃಹತ್ ವೇದಿಕೆಯ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಡಿಜಿಟಲ್ ಗ್ರಂಥಾಲಯ ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು ಇದರ ಸದ್ಬಳಕೆ ಮಾಡಿ ಕೊಂಡು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದೆ ಬರಬೇಕು. ಕಳೆದ ಸಾಲಿನಲ್ಲಿ ೬೦೦ ಕ್ಕೆ ೫೯೯ ಅಂಕಗಳನ್ನು ತೆಗೆದ ವಿದ್ಯಾರ್ಥಿಗಳಿಗೆ ೧ ಲಕ್ಷ ಬಹುಮಾನ ಘೋಷಣೆ ಮಾಡಿದ್ದೆ, ಆದರೆ ಯಾವ ವಿದ್ಯಾರ್ಥಿಗಳು ತೆಗೆದಿಲ್ಲ, ಆದ್ದರಿಂದ ಈ ಸಾಲಿನಲ್ಲಿ ಆದರೂ ೬೦೦ ಕ್ಕೆ ೫೯೯ ಅಂಕಗಳನ್ನು ಪಡೆದು ಕೊಂಡು ಕಾಲೇಜಿಗೆ ಮತ್ತು ತಾಲೂಕಿನ ಕೀರ್ತಿ ತನ್ನಿ ಎಂದು ಮನವಿ ಮಾಡಿದರು.

ಪ್ರಾಂಶುಪಾಲ ಹೆಚ್.ಕೆ.ಕೃಷ್ಣಯ್ಯ ಮಾತನಾಡಿ ಕಾಲೇಜಿನಲ್ಲಿ ೧೫೦೦ ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದು ಕಾಲೇಜಿನ ಆವರಣದಲ್ಲಿ ಕಾಂಪೌoಡ್ ನಿರ್ಮಾಣ ಮಾಡಿಸಿ ಕೊಡಬೇಕಾಗಿ ಮನವಿ ಮಾಡಿದರಲ್ಲದೆ ನಮ್ಮ ಕಾಲೇಜು ಶೇ ೧೦೦% ರಷ್ಟು ಫಲಿತಾಂಶ ಬರುತ್ತಿದೆ. ಇದನ್ನೆಲ್ಲ ಮನಗಂಡು ಪೋಷಕರು ಸರ್ಕಾರಿ ಕಾಲೇಜು ಎಂದು ಮೂಗು ಮುರಿಯದೇ ತಮ್ಮ ಮಕ್ಕಳನ್ನು ನಮ್ಮ ಕಾಲೇಜಿಗೆ ದಾಖಲು ಮಾಡುತ್ತಿದ್ದಾರೆ ಎಂದರು.

ಅರ್ಥಶಾಸ್ತç ಹಿರಿಯ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಡಿ.ಶ್ರೀನಿವಾಸ್ ಮಾತನಾಡಿ ಶಿಕ್ಷಣ ಕ್ಷೇತ್ರದ ಉನ್ನತ್ತಿಗಾಗಿ ಪೋಷಕರು ಹಾಗೂ ಶಿಕ್ಷಕರು ಸಹಕರಿಸಬೇಕಾಗುತ್ತದೆ. ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ತಮ್ಮ ತಮ್ಮ ಪಾಲಿನ ಪಾತ್ರವನ್ನು ಪ್ರಾಮಾಣಿಕವಾಗಿ, ಜವಾಬ್ದಾರಿಯುತವಾಗಿ ಮಾಡಿದರೆ ಶಿಕ್ಷಣ ಕ್ಷೇತ್ರ ಬೆಳವಣಿಯಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ, ಕ್ರೀಡಾ ಮತ್ತು ಕಲೆ-ಸಂಸ್ಕೃತಿಕ ಕ್ಷೇತ್ರದ ಅಭಿವದ್ದಿಗಾಗಿ ಪ್ರತಿಯೊಬ್ಬರು ಸಹಕರಿಸಬೇಕೆಂದರು.

ಸಾoಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಬಾಲಕಿಯರಿಗೆ ಬಹುಮಾನ ವಿತರಿಸಲಾಯಿತು. ಅರ್ಥಶಾಸ್ತç ವಿಷಯದಲ್ಲಿ ಅತ್ಯುನ್ನತ ಅಂಕ ಗಳಿಸಿದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ, ಶಾಸಕ ಡಿ.ರವಿಶಂಕರ್, ರಾಜ್ಯ ಪ್ರಶಸ್ತಿ ವಿಜೇತರಾದ ಪ್ರಾಂಶುಪಾಲ ಹೆಚ್.ಕೆ.ಕೃಷ್ಣಯ್ಯ ಹಾಗೂ ಸುಮಾರು ೪೫ ಮಂದಿ ಬೋಧಕ ಮತ್ತು ಬೋಧಕೇತರ ವರ್ಗದವರಿಗೆ ಅರ್ಥಶಾಸ್ತç ಹಿರಿಯ ಉಪನ್ಯಾಸಕ ಡಿ.ಶ್ರೀನಿವಾಸ್ ವಯಕ್ತಿಕವಾಗಿ ಸನ್ಮಾನಿಸಿ ಗೌರವ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಸುನೀತಾ ರಮೇಶ್, ಉಪನ್ಯಾಸಕರಾದ ಚಂದ್ರಕುಮಾರ್, ಗುರುರಾಜ್, ಕೃಷ್ಣ, ಸುರುಚಿ, ಪುಣ್ಯಶ್ರೀ, ದಾಕ್ಷಾಯಿಣಿ, ಕೆ.ಮಂಜೇಶ್, ಜಗದೀಶ್, ರೇಖಾ, ವಿದ್ಯಾ, ಎನ್.ಶೋಭಾ, ಕುಮಾರ್, ಭರತ್, ಸುಧೀಂದ್ರ, ಶಶಿಕುಮಾರ್, ಅತಿಥಿ ಉಪನ್ಯಾಸಕರಾದ ಶರತ್, ವಿವೇಕ್, ಮೇಘ, ಆರ್.ಭಾಗ್ಯ, ಸಮಾಜ ಸೇವಕಿ ರೇಖಾಶ್ರೀನಿವಾಸ್, ಸಿಬ್ಬಂದಿಗಳಾದ ಅಪಲೋಮಹೇಶ್, ರವಿ, ಶಶಿಕುಮಾರ್ ಇನ್ನಿತರರು ಇದ್ದರು.

RELATED ARTICLES
- Advertisment -
Google search engine

Most Popular