Saturday, April 19, 2025
Google search engine

Homeರಾಜ್ಯಸುದ್ದಿಜಾಲಅಂಬರೀಶ್ ಮಾನವೀಯತೆಯ ಬಹುದೊಡ್ಡ ಗುಣ ಹೊಂದಿದ್ದರು : ಸುರೇಶ್ ಋಗ್ವೇದಿ

ಅಂಬರೀಶ್ ಮಾನವೀಯತೆಯ ಬಹುದೊಡ್ಡ ಗುಣ ಹೊಂದಿದ್ದರು : ಸುರೇಶ್ ಋಗ್ವೇದಿ

ಚಾಮರಾಜನಗರ: ಚಿತ್ರನಟರು, ಮಾಜಿ ಸಂಸದ ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರು ಮಾನವೀಯತೆಯ ಬಹುದೊಡ್ಡ ಗುಣ ಹೊಂದಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ತಿಳಿಸಿದರು .

ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡಚಿತ್ರನಟರು, ಮಾಜಿ ಸಂಸದ ದಿ. ಅಂಬರೀಶ್ ಅವರ 72 ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬರೀಶ್ ಅವರು ಕನ್ನಡ ಚಿತ್ರರಂಗದಲ್ಲಿ ದೊಡ್ಡ ಕಲಾವಿದರು ಆಗಿದ್ದು, ಅಪಾರ ಅಭಿಮಾನಿ ಬಳಗ ಹೊಂದಿದ್ದು ಜನರ ಅಚ್ಚುಮೆಚ್ಚಿನ ನಟರಾಗಿದ್ದರು. ಚಿತ್ರರಂಗ ಅಲ್ಲದೇ ಉತ್ತಮ ರಾಜಕಾರಣಯಾಗಿದ್ದು ಅಪಾರ ಕೊಡುಗೆ ನೀಡಿದ್ದಾರೆ . ನಾಡಿನ ಸಂಕಷ್ಟ ಕಾಲದಲ್ಲಿ ಕಲಾವಿದರ ಸುಖ-ದುಃಖಗಳಲ್ಲಿ ಸದಾ ನಾಯಕತ್ವ ವಹಿಸಿ ದೊಡ್ಡಶಕ್ತಿಯಾಗಿ, ಇಂದಿಗೂ ಜನರ ಹೃದಯದಲ್ಲಿ ಜೀವಂತವಾಗಿರುವ ಅಂಬರೀಶ್ ನಾಡು ನುಡಿ ಜಲ ಭಾಷೆಗೂ ಹಾಗೂ ಚಲನಚಿತ್ರ ರಂಗಕ್ಕೂ ಅಗಾಧ ಕೊಡುಗೆ ನೀಡಿದ್ದಾರೆ.

ನಗರದ ಪ್ರಮುಖ ರಸ್ತೆಗೆ ಅಂಬರೀಶ್ ಹೆಸರು ನಾಮಕರಣ ಮಾಡಿ: ಸಮಾಜಕ್ಕಾಗಿ ದುಡಿದವರು ಹಾಗೂ ಉತ್ತಮ ಕಲಾವಿದರ ಹೆಸರುಗಳನ್ನು ರಸ್ತೆ ನಾಮಕರಣ ಮಾಡಬೇಕು. ರೆಬರ್ ಸ್ಟಾರ್ ಅಂಬರೀಶ್ ಅವರ ಹೆಸರನ್ನು ನಗರದ ಪ್ರಮುಖ ರಸ್ತೆಗೆ ನಾಮಕರಣ ಮಾಡುವ ಕೆಲಸ ಆಗಬೇಕು. ಕಲಾವಿದರನ್ನು ಗೌರವಿಸಿದರೆ ಸಮಾಜದ ಅಸ್ತಿತ್ವ ದಲ್ಲಿದ್ದು, ಗೌರವ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಮಾನವೀಯ ಗುಣ, ಸಂಸ್ಕಾರ, ಸಂಸ್ಕೃತಿ ಗುಣ ನಾಶವಾಗುತ್ತದೆ. ಭವಿಷ್ಯದ ಸಮಾಜ ಹಿರಿಯರ ಕೊಡುಗೆಯನ್ನು ತಿಳಿಸುವುದು ನಮ್ಮ ಕರ್ತವ್ಯವೆಂದರು.
1996ರಲ್ಲಿ ಅಂಬರೀಷ್ ರವರ ಚಲನಚಿತ್ರರಂಗದ ಕೊಡುಗೆ ಮತ್ತು ಸಾಧನೆ ಗುರುತಿಸಿ ಗಡಿ ಭಾಗವಾದ ಚಾಮರಾಜನಗರದ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಹಾಗೂ ಬೆಳ್ಳಿ ಕಿರೀಟ ಧಾರಣೆ ಮಾಡಿ ಗೌರವಿಸಲಾಯಿತು ಎಂದು ಋಗ್ವೇದಿ ವಿವರಿಸಿದರು.

ಬರಹಗಾರ ಲಕ್ಷ್ಮೀನರಸಿಂಹ ಮಾತನಾಡಿ. ಅಂಬರೀಶ್ ಅವರು ಹೃದಯವಂತ ಕಲಾವಿದರಾಗಿದ್ದರು.. ಕಳನಾಯಕನಾಗಿ, ಪೋಷಕ ನಟನಾಗಿ, ನಾಯಕರಾಗಿದ್ದು, ಉತ್ತಮ ರಾಜಕಾರಣಿಯಾಗಿ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟರು. ಕರ್ನಾಟಕ ಸೇನಾಪಡೆ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಅಂಬರೀಶ್ ಅವರ ಭಾವಚಿತ್ರ ಪುಷ್ಷಾರ್ಚನೆ ಮಾಡಿ, ಮಾತನಾಡಿ, ಅಂಬರೀಶ್ ಅವರು ಸರಳ ವ್ಯಕ್ತಿತ್ವ ಹೊಂದಿದ್ದರು ಅವರಿಗೆ ಮುಖ್ಯಮಂತ್ರಿ ಯಾಗುವ ಎಲ್ಲ ಅರ್ಹತೆ ಹೊಂದಿದ್ದರು.ಕಾವೇರಿ ವಿಚಾರದಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಅಂಬರೀಶ್,ನಾಡಕಂಡ ಅಭೂತಪೂರ್ವ ಕಲಾವಿದರು, ರಾಜಕಾರಣಿಯಾಗಿದ್ದರು.

ನಗರಸಭೆ ಮಾಜಿ ಅಧ್ಯಕ್ಷ ಸಿ.ಎಸ್.ಸುರೇಶ್ ನಾಯಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮ ದಲ್ಲಿ ಪಣ್ಯದಹುಂಡಿ ರಾಜು, ಶಿಕ್ಷಕ ರಂಗನಾಥ್, ನಗರಸಭಾ ಮಾಜಿ ಅಧ್ಯಕ್ಷ ಮಹದೇವನಾಯಕ, ರವಿಚಂದ್ರಪ್ರಸಾದ್ ಕಹಳೆ, ಪ್ರಕಾಶ್, ಶಿವಲಿಂಗಮೂರ್ತಿ, ತಾಂಡವಮೂರ್ತಿ, ನಂಜುಂಡಶೆಟ್ಟಿ, ಅರುಣ್ ಕುಮಾರ್ ಗೌಡ , ಭದ್ರಿ ಹಾಜರಿದ್ದರು.

RELATED ARTICLES
- Advertisment -
Google search engine

Most Popular