Monday, April 7, 2025
Google search engine

Homeರಾಜ್ಯಸುದ್ದಿಜಾಲಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪಿರಿಯಾಪಟ್ಟಣ ತಾಲೂಕು ಘಟಕ ಅಧ್ಯಕ್ಷರಾಗಿ ಮಂಜು ಆಯಿತನಹಳ್ಳಿ ಆಯ್ಕೆ

ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪಿರಿಯಾಪಟ್ಟಣ ತಾಲೂಕು ಘಟಕ ಅಧ್ಯಕ್ಷರಾಗಿ ಮಂಜು ಆಯಿತನಹಳ್ಳಿ ಆಯ್ಕೆ

ಸಂಘಟನೆ ವಹಿಸಿದ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸುವೆ ; ಮಂಜು ಆಯಿತನಹಳ್ಳಿ

ವರದಿ: ಬೆಕ್ಕರೆ ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಪಿರಿಯಾಪಟ್ಟಣ ತಾಲೂಕು ಘಟಕ ನೂತನ ಅಧ್ಯಕ್ಷರಾಗಿ ಮಂಜು ಆಯಿತನಹಳ್ಳಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ.

ಸಂಘಟನೆ ರಾಜ್ಯಾಧ್ಯಕ್ಷರಾದ ಕೋದಂಡರಾಮ್  ಅವರ ಸೂಚನೆಯಂತೆ ರಾಜ್ಯ ಕಾರ್ಯದರ್ಶಿಯಾದ ಎಂ.ಕೆ ಕಾಂತರಾಜು ಅವರು ತಾಲೂಕು ಘಟಕದ ಅಧ್ಯಕ್ಷರಾಗಿ ಮಂಜು ಆಯಿತನಹಳ್ಳಿ ಅವರ ಹೆಸರು ಘೋಷಣೆ ಮಾಡಿದ್ದಾರೆ ಇದೇ ವೇಳೆ ವಿವಿಧ ಘಟಕ ಪದಾಧಿಕಾರಿಗಳ ಹೆಸರು ಘೋಷಿಸಲಾಗಿದೆ.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಂಜು ಆಯಿತನಹಳ್ಳಿ ಅವರು ಮಾತನಾಡಿ ಸಂಘಟನೆ ನೀಡಿದ ಜವಾಬ್ದಾರಿಯನ್ನು ಪಾರದರ್ಶಕವಾಗಿ ನಿಭಾಯಿಸಿ ಸಮಾಜದಲ್ಲಿ ನೊಂದವರ ಪರ ಕರ್ತವ್ಯ ನಿರ್ವಹಿಸಿ ಸಂಘಟನೆಗೆ ಉತ್ತಮ ಹೆಸರು ತರುವುದಾಗಿ ಭರವಸೆ ನೀಡಿ ಆಯ್ಕೆಯಾಗಲು ಸಹಕರಿಸಿದ ರಾಜ್ಯ ಮತ್ತು ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಧನ್ಯವಾದ ಹೇಳಿದರು.

ನೂತನ ಪದಾಧಿಕಾರಿಗಳು:
ಉಪಾಧ್ಯಕ್ಷರಾಗಿ ಸಿ.ಎಸ್ ಮಹದೇವ್ ಹಾಗೂ ಕೇಶವಮೂರ್ತಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜು ಆರ್ ಹೊಸಹಳ್ಳಿ, ಸಹ ಕಾರ್ಯದರ್ಶಿಯಾಗಿ ಮಂಜು ಅಸ್ವಾಳ್, ಸಂಘಟನಾ ಸಂಚಾಲಕರಾಗಿ ಮಣಿಕಂಠ, ಸಂಘಟನಾ ಕಾರ್ಯದರ್ಶಿಯಾಗಿ ದೊಡ್ಡಯ್ಯ, ಹಾರನಹಳ್ಳಿ ಹೋಬಳಿ ಅಧ್ಯಕ್ಷರಾಗಿ ಜಗದೀಶ್ ಆಯ್ಕೆಯಾಗಿದ್ದಾರೆ. 

RELATED ARTICLES
- Advertisment -
Google search engine

Most Popular