Tuesday, April 15, 2025
Google search engine

Homeರಾಜ್ಯಸುದ್ದಿಜಾಲಅಂಬೇಡ್ಕರ್ ಚಿಂತನೆ – ಬಡವರ ಏಳಿಗೆಗೆ ದೀಪದಂತೆ: ಪ್ರಭಾರ ಪ್ರಾಚಾರ್ಯ ಮೂರ್ತಿ ಆರ್

ಅಂಬೇಡ್ಕರ್ ಚಿಂತನೆ – ಬಡವರ ಏಳಿಗೆಗೆ ದೀಪದಂತೆ: ಪ್ರಭಾರ ಪ್ರಾಚಾರ್ಯ ಮೂರ್ತಿ ಆರ್

ಚಾಮರಾಜನಗರ: ವಿಶ್ವಕ್ಕೆ ಮಾದರಿಯಾದ ಸಂವಿಧಾನವನ್ನು ರಚಿಸಿ ಭಾರತದ ಕೋಟ್ಯಾಂತರ ಜನರ ಅಭ್ಯುದಯಕ್ಕೆ ಕಾರಣರಾದ ಬಿ ಆರ್ ಅಂಬೇಡ್ಕರ್ ಅವರನ್ನು ನೆನೆಯುವುದು ಪುಣ್ಯದ ಕೆಲಸವೆಂದು ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಚಾರ್ಯ ಮೂರ್ತಿ ಆರ್ ತಿಳಿಸಿದರು.

ಅವರು ಅಮಚವಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಜರಗಿದ ಬಾಬಾ ಸಾಹೇಬ್ ಬಿಆರ್ ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಶಿಕ್ಷಣ ,ಸಂಘಟನೆ ಮೂಲಕ ಜನಸಾಮಾನ್ಯರ ಬದುಕಿಗೆ ಹೊಸ ಮಾರ್ಗವನ್ನು ಸಂವಿಧಾನಾತ್ಮಕವಾಗಿ ನೀಡಿ ಸಮಗ್ರ ಬಡವರ ಏಳಿಗೆಗೆ ಕಾರಣವಾದ ಅಂಬೇಡ್ಕರ್ ರವರ ಚಿಂತನೆ, ಮಾರ್ಗದರ್ಶನ, ಜ್ಞಾನ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿದೆ ಎಂದರು.

ಇತಿಹಾಸ ಉಪನ್ಯಾಸಕ ಸುರೇಶ್ ಎನ್ ಋಗ್ವೇದಿ ಮಾತನಾಡಿ ವಿಶ್ವ ಜ್ಞಾನಿಯಾದ ಅಂಬೇಡ್ಕರ್ ಅವರ ದೂರ ದೃಷ್ಟಿ ಭಾರತವನ್ನು ನವ ಭಾರತವಾಗಿ ಸೃಷ್ಟಿಸಲು, ಇಡೀ ವಿಶ್ವಕ್ಕೆ ಮಾದರಿಯಾದ ರಾಷ್ಟ್ರವನ್ನಾಗಿ ಅಭಿವೃದ್ಧಿ ಪಡಿಸುವಲ್ಲಿ ಸಂವಿಧಾನದ ಬೆಳವಣಿಗೆ ಮಹತ್ವವಾದ ಪರಿಣಾಮವನ್ನು ಬೀರಿದೆ. ಭಾರತೀಯರು ಇಂದು ಸಮಗ್ರ ವಿಕಾಸದಲ್ಲಿ ಮುನ್ನಡೆ ಹೊಂದಿ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಅಂಬೇಡ್ಕರ್ ಅವರ ಚಿಂತನೆ ಕಾರಣವಾಗಿದೆ. ಉನ್ನತ ಶಿಕ್ಷಣವನ್ನು ಪಡೆದು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ಸಾಧಿಸಬೇಕು. ಅಂಬೇಡ್ಕರ್ ಅವರ ಬದುಕು ಮತ್ತು ಜೀವನವನ್ನು ಅಧ್ಯಯನ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಶಿವಸ್ವಾಮಿ, ರಮೇಶ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular