ಲಂಬಾಣಿ ಸಮುದಾಯದಲ್ಲಿ ಆದಂತ ಮೂಲವನ್ನು ಇಟ್ಟುಕೊಂಡು ತಯಾರಾದ ಸಿನಿಮಾ ಅಂಬುಜಾ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದೆ. ರಜಿನಿ ಹಾಗೂ ಶುಭಾ ಪೂಂಜಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಇದೇ ತಿಂಗಳ 21ಕ್ಕೆ ತೆರೆಗೆ ಬರುವುದಕ್ಕೆ ಸಿದ್ಧವಾಗಿದೆ. ಟೀಸರ್ ಮತ್ತು ಟೈಟಲ್ ಟ್ರಾಕ್ ರಿಲೀಸ್ ಮಾಡಲಾಗಿದೆ.
ಈ ವೇಳೆ ಮಾಧ್ಯಮದವರ ಮುಂದೆ ಇಡೀ ತಂಡ ಸಂತಸ ವ್ಯಕ್ತಪಡಿಸಿದೆ. ಮೊದಲಿಗೆ ನಿರ್ದೇಶಕ ಶ್ರೀನಿ ಹನುಮಂತರಾಜು ಮಾತನಾಡಿ, ನಾನು ಪೂಜಾ ಅದಾಗಲೇ ಒಂದು ಸಿನಿಮಾ ಮಾಡಿದ್ದೆವು. ಇನ್ನೊಂದು ಸಿನಿಮಾ ಮಾಡಬೇಕು ಎಂದು ಯೋಚಿಸುತ್ತಿದ್ದೆವು. ಅದೇ ಸಮಯಕ್ಕೆ ಕಾಶಿ ಸರ್ ಸಿಕ್ಕರು. ನಾನು ಗ್ಯಾರಂಟಿ ನೀಡುತ್ತೇನೆ.
ಈ ಕಥೆ ನೀವೆಲ್ಲು ನೋಡಿರಲ್ಲ. ನಾವೂ ಸುಮ್ಮನೇ ಹೇಳುತ್ತಿಲ್ಲ. ಭರವಸೆ ನೀಡುತ್ತಿದ್ದೇವೆ. ಇದಕ್ಕೆ ಮೊದಲಿಗೆ ಕಲಾವಿದರಾಗಿ ಬಂದಿದ್ದು, ಶುಭಾ ಪೂಂಜಾ.ರಜಿನಿ ಆಯ್ಕೆಯಾಗಿದ್ದೇ ವಿಚಿತ್ರ. ಸಿನಿಮಾನ ನಾವೂ ನೋಡಿದ್ದೀವಿ. ನಮ್ಮ ಕೈಕಾಲೇ ವೈಬ್ರೇಷನ್ ಆಗಿತ್ತು ಎಂದಿದ್ದಾರೆ.
ಇನ್ನು ನಿರ್ಮಾಪಕ ಕಾಶಿನಾಥ್ ವಿ ಮಡಿವಾಳರ್ ಮಾತನಾಡಿ, ನಾನು ಕಥೆ ಬರೆದಾಗ ಇಷ್ಟೊಂದು ಚೆನ್ನಾಗಿ ಬರುತ್ತೆ ಅಂತ ಗೊತ್ತಿರಲಿಲ್ಲ. ಎಲ್ಲರೂ ಶ್ರಮ ಹಾಕಿದ್ದಾರೆ. ರಜಿನಿ ಮೇಡಂಗೆ ಕಾಲು ನೋವಿದ್ದರು 25 ಕೆಜಿ ತೂಕದಷ್ಟು ಕಾಸ್ಟ್ಯೂಮ್ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾರೆ. ಶುಭಾ ಮೇಡಂ ಎತ್ತರದ ಭಯ ಇದ್ರು ಈ ಸಿನಿಮಾಗಾಗಿ ಎಫರ್ಟ್ ಹಾಕಿದ್ದಾರೆ. ನಿಮಗೂ ಸಿನಿಮಾ ಖಂಡಿತ ಇಷ್ಟವಾಗುತ್ತೆ ಎಂದಿದ್ದಾರೆ.
ನಟ, ದೀಪಕ್ ಸುಬ್ರಮಣ್ಯ ಮಾತನಾಡಿ, ಮಹಿಳಾ ಪ್ರಧಾನವಾದ ಸಿನಿಮಾದಲ್ಲಿ ನಾನು ನಾಯಕನಾಗಬೇಕು ಎಂದಾಗ ನನಗೆ ಶಾಜ್ ಆಗಿತ್ತು. ಅದು ಹೇಗೆ ಎಂದು ಕೇಳಿದಾಗ ಶ್ರೀನಿ ಒಂದಷ್ಟು ವಿಚಾರ ಹೇಳಿದರು. ಸ್ಕ್ರಿಪ್ಟ್ ನೋಡಿದಾಗ, ಶೂಟಿಂಗ್ ಹೋದಾಗ ಅರ್ಥ ಆಯ್ತು. ಶ್ರೀನಿ ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಮಾಡಿದ್ದಾರೆ ಎಂದಿದ್ದಾರೆ.
ಶುಭಾ ಪೂಂಜಾ ಮಾತನಾಡಿ, ನನ್ನ ಪಾತ್ರ ಒಂದು ಕ್ರೈಂ ರಿಪೋರ್ಟರ್ ಪಾತ್ರ. ಸಿನಿಮಾ ಅದ್ಬುತವಾಗಿ ಮೂಡಿ ಬಂದಿದೆ. ಶ್ರೀನಿ ಜೊತೆಗೆ ಇದು ಎರಡನೇ ಸಿನಿಮಾ. ಎಲ್ಲಾ ಅಂಶಗಳನ್ನು ಒಂದು ಸಿನಿಮಾದಲ್ಲಿ ಹಾಕುತ್ತಾರೆ. ಆ ನಂಬಿಕೆ ಶ್ರೀನಿ ಮೇಲಿದೆ. ಹೀಗಾಗಿ ಎಲ್ಲರು ಬಂದು ಥಿಯೇಟರ್ ನಲ್ಲಿ ಸಿನಿಮಾ ನೋಡಿ.
ರಜಿನಿ ಮಾತನಾಡಿ, ನನ್ನ ಪಾತ್ರ ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ನಾನು ಹೇಳೋದಕ್ಕಿಂತ ಜನ ನೋಡಿ, ಮೆಚ್ಚಿಕೊಂಡರೆ ಖುಷಿಯಾಗುತ್ತದೆ. ಇನ್ನು ಸಿನಿಮಾಗೆ ನಿರ್ಮಾಪಕರೇ ಸಾಹಿತ್ಯ ಕೂಡ ಬರೆದಿದ್ದಾರೆ. ಪ್ರಸನ್ನ ಕುಮಾರ್ ಎಂ ಎಸ್ ಸಂಗೀತ ನಿರ್ದೇಶನ ಮಾಡಿದ್ದು, ಲಾಲಿ ಹಾಡನ್ನು ನಿರ್ಮಾಪಕ ಕಾಶಿನಾಥ್ ಮಗಳು, ಆಕಾಂಕ್ಷ ಅದ್ಭುತವಾಗಿ ಹಾಡಿದ್ದಾರೆ.