Friday, April 11, 2025
Google search engine

Homeವಿದೇಶಅಮೆರಿಕ : ಹೆಲೆನ್ ಚಂಡಮಾರುತ ಆರ್ಭಟ: 33 ಮಂದಿ ಸಾವು

ಅಮೆರಿಕ : ಹೆಲೆನ್ ಚಂಡಮಾರುತ ಆರ್ಭಟ: 33 ಮಂದಿ ಸಾವು

ವಾಷಿಂಗ್ಟನ್: ಅಮೆರಿಕದಲ್ಲಿ ಹೆಲೆನ್ ಚಂಡಮಾರುತದಿಂದ ಕನಿಷ್ಠ ೩೩ ಜನ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಚಂಡಮಾರುತದಿಂದ ಫ್ಲೋರಿಡಾ ರಾಜ್ಯದ ರಾಜಧಾನಿ ತಲ್ಲಾಹಸ್ಸೀ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ರಸ್ತೆಗಳು, ಮನೆಗಳು ಮತ್ತು ವಾಣಿಜ್ಯ ಕಟ್ಟಡಗಳು ನೆಲಸಮವಾಗಿವೆ. ಅಲ್ಲದೇ ಧಾರಾಕಾರ ಮಳೆಯಿಂದ ಹಲವಾರು ಪ್ರದೇಶಗಳು ಪ್ರವಾಹದಿಂದ ತತ್ತರಿಸಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ಕೆರೊಲಿನಾದಲ್ಲಿ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕನಿಷ್ಠ ೧೪ ಜನರು ಸಾವನ್ನಪ್ಪಿದ್ದಾರೆ.
ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ತನ್ನ ರಾಜ್ಯದಲ್ಲಿ ರಕ್ಷಣಾ ಸಿಬ್ಬಂದಿಯೂ ಸೇರಿದಂತೆ ೧೧ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular