Friday, April 11, 2025
Google search engine

HomeUncategorizedರಾಷ್ಟ್ರೀಯಅಮಿತ್ ಶಾ, ಜೈಶಂಕರ್ ಗೆ ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಉಗ್ರ ಜಿಎಸ್ ಪನ್ನು...

ಅಮಿತ್ ಶಾ, ಜೈಶಂಕರ್ ಗೆ ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಉಗ್ರ ಜಿಎಸ್ ಪನ್ನು ಬೆದರಿಕೆ

ಹೊಸದಿಲ್ಲಿ: ಖಲಿಸ್ತಾನು ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಆರೋಪಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಕೆನಡಾ ಭಾರತೀಯ ಹೈಕಮಿಷನರ್ ಸಂಜಯ್ ಕುಮಾರ್ ವರ್ಮಾ ಅವರಿಗೆ ನಿಷೇಧಿತ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಉಗ್ರ ಜಿಎಸ್ ಪನ್ನು ಬೆದರಿಕೆಯೊಡ್ಡಿದ್ದಾನೆ.

ಇಂದು ಬಿಡುಗಡೆಯಾದ ವೀಡಿಯೊದಲ್ಲಿ, ಈ ಮೂವರ ವಿದೇಶ ಪ್ರವಾಸದ ಬಗ್ಗೆ ಮಾಹಿತಿ ನೀಡುವವರಿಗೆ 125000 ಯುಎಸ್ ಡಾಲರ್ ಬಹುಮಾನ ನೀಡುವುದಾಗಿ ಜಿಎಸ್ ಪನ್ನು ಘೋಷಿಸಿದ್ದಾನೆ.

ಕಳೆದ ಜೂನ್‌ ನಲ್ಲಿ ವ್ಯಾಂಕೋವರ್‌ ನಲ್ಲಿ ಖಲಿಸ್ತಾನ್ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾಗಿತ್ತು.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆಯ ಅಡಿಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಬೇಕಾಗಿದ್ದಾರೆ. ಯುಎಸ್ ಮತ್ತು ಕೆನಡಾದ ಅವಳಿ ಪಾಸ್ಪೋರ್ಟ್‌ ಗಳನ್ನು ಹೊಂದಿರುವ ಪನ್ನು, ಅಂತರ-ಗ್ಯಾಂಗ್ ವಾರ್‌ ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ನಿಜ್ಜರ್‌ ಗೆ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಈ ಮೂವರನ್ನು ಹೊಣೆಗಾರರನ್ನಾಗಿ ಮಾಡುವುದಾಗಿ ಬೆದರಿಕೆ ಹಾಕಿದರು.

ಆಗಸ್ಟ್ 15 ರಂದು ಒಟ್ಟಾವಾ, ಟೊರೊಂಟೊ ಮತ್ತು ವ್ಯಾಂಕೋವರ್‌ ನಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣಗಳಿಗೆ ಮುತ್ತಿಗೆ ಹಾಕಲು ಕೆನಡಾ ಮೂಲದ ಸಿಖ್ ಮೂಲಭೂತವಾದಿಗಳಿಗೆ ಎಸ್ಎಫ್ ಜೆ ಕರೆ ನೀಡಿದೆ.

 
RELATED ARTICLES
- Advertisment -
Google search engine

Most Popular