Wednesday, April 9, 2025
Google search engine

Homeಅಪರಾಧತರಬೇತಿ ವೇಳೆ ಮದ್ದುಗುಂಡು ಸ್ಫೋಟ: ಇಬ್ಬರು ಯೋಧರ ಸಾವು

ತರಬೇತಿ ವೇಳೆ ಮದ್ದುಗುಂಡು ಸ್ಫೋಟ: ಇಬ್ಬರು ಯೋಧರ ಸಾವು

ಜೈಪುರ: ತರಬೇತಿ ವೇಳೆ ಬುಧವಾರದಂದು ಟ್ಯಾಂಕ್‌ನಲ್ಲಿ ಮದ್ದುಗುಂಡುಗಳನ್ನು ತುಂಬುತ್ತಿದ್ದಾಗ, ಬಿಕಾನೇರ್‌ನ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಒಬ್ಬರು ಗಾಯಗೊಂಡಿದ್ದಾರೆ.

ಅವರು ಮದ್ದುಗುಂಡುಗಳನ್ನು ಲೋಡ್ ಮಾಡುವಾಗ ಚಾರ್ಜರ್ ಸ್ಫೋಟಗೊಂಡಿದೆ ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ ಹೇಳಿದ್ದಾರೆ. ಘಟನೆಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಸ್ಫೋಟದ ಬಗ್ಗೆ ಮಾಹಿತಿ ಬಂದ ತಕ್ಷಣ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಮೂರು ಸೈನಿಕರು ಟ್ಯಾಂಕ್‌ನೊಂದಿಗೆ ಅಭ್ಯಾಸ ನಡೆಸುತ್ತಿದ್ದರು. ಸ್ಫೋಟದಲ್ಲಿ ಅಶುತೋಷ್ ಮಿಶ್ರಾ ಮತ್ತು ಜಿತೇಂದ್ರ ಸಾವನ್ನಪ್ಪಿದ್ದಾರೆ. ಗಾಯಗೊಂಡ ಯೋಧನನ್ನು ಹೆಲಿಕಾಪ್ಟರ್‌ನಲ್ಲಿ ಚಂಡೀಗಢಕ್ಕೆ ಕರೆದೊಯ್ಯಲಾಗಿದೆ” ಎಂದು ಸರ್ಕಲ್ ಆಫೀಸರ್ ಲುಂಕರನ್‌ಸರ್ (ಬಿಕಾನೇರ್) ನರೇಂದ್ರ ಕುಮಾರ್ ಪೂನಿಯಾ ತಿಳಿಸಿದ್ದಾರೆ.

ಮಿಶ್ರಾ ಉತ್ತರ ಪ್ರದೇಶದ ಡಿಯೋರಿಯಾ ನಿವಾಸಿ, ಜಿತೇಂದ್ರ ರಾಜಸ್ಥಾನದ ದೌಸಾ ನಿವಾಸಿಯಾಗಿದ್ದರು. ಅವರ ಮೃತದೇಹಗಳನ್ನು ಸೂರತ್‌ಗಢ ಸೇನಾ ಠಾಣೆಗೆ ಕೊಂಡೊಯ್ಯಲಾಯಿತು.

RELATED ARTICLES
- Advertisment -
Google search engine

Most Popular