ವರದಿ : ಚಪ್ಪರದಹಳ್ಳಿ ವಿನಯ್ ಕುಮಾರ್
ಬೆಟ್ಟದಪುರ : ಬೆಳೆದು ನಿಂತ ಮಕ್ಕಳನ್ನು ತಮ್ಮ ಕಣ್ಣೆದುರು ಕಳೆದುಕೊಂಡು ಅಂತರಂಗದಲ್ಲಿ ಅಪಾರವಾದ ನೋವು ತುಂಬಿಕೊಂಡಿದ್ದರೂ ಮಕ್ಕಳ ಹೆಸರಿನಲ್ಲಿ ಅಮೋಘ ವರ್ಷ ಅಮೃತ ವರ್ಷಿಣಿ ಸೇವಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಸಮಾಜ ಮುಖಿ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ತಿಳಿಸಿದರು.
ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅಮೋಘ ವರ್ಷ ಅಮೃತ ವರ್ಷಿಣಿ ಸೇವಾ ಪ್ರತಿಷ್ಠಾನದ ವತಿಯಿಂದ 6ನೇ ವರ್ಷದ ಸಂಸ್ಮರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರತಿಷ್ಠಾನವು ಸಮಾಜ ಮುಖಿ ಕಾರ್ಯ ಮಾಡಿದವರಿಗೆ ಮಕ್ಕಳ ಹೆಸರಿನಲ್ಲಿ ಪ್ರಶಸ್ತಿ, ಕನ್ನಡ ಭಾಷೆಯಲ್ಲಿ 125ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ, ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಪುರಸ್ಕರಿಸುವ ಮೂಲಕ ಸಾರ್ಥಕ ಕೆಲಸ ಮಾಡಿ ಸೇವೆಯಲ್ಲಿ ಸಂತೃಪ್ತಿ ಪಡೆಯುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅವರು ಸರ್ಕಾರಿ ಶಾಲೆಯ ಮಕ್ಕಳು ಸಂಘ ಸಂಸ್ಥೆಗಳು ನೀಡುವ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ನಿರ್ದಿಷ್ಟ ಗುರಿ ತಲುಪಿ ದೇಶ ಹೆಮ್ಮೆ ಪಡುವ ವ್ಯಕ್ತಿಗಳಾ ಗಬೇಕು, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಶೇಷ ಚೇತನ ವಿದ್ಯಾರ್ಥಿ ಅನುಶ್ರೀ ಜಿಲ್ಲಾಧಿಕಾರಿ ಆಗಬೇಕು ಎಂಬ ಬಯಕೆಯು ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಬೇಕು.ಜೀವನದಲ್ಲಿ ಆದರ್ಶ ಗುರಿಯನ್ನು ಇಟ್ಟುಕೊಂಡು ಆ ದಾರಿಯಲ್ಲಿ ನಡೆಯಬೇಕು. ಸಂಸ್ಥೆ ಮಾಡುವ ಎಲ್ಲಾ ಕಾರ್ಯಕ್ರಮಗಳು ಸಮಾಜ ಮುಖಿ ಯಾಗಿದ್ದು ಸೇವೆಯಲ್ಲಿ ಸಂತೃಪ್ತಿ ಕಂಡುಕೊಳ್ಳುತ್ತಾ ಅಗಲಿದ ಮಕ್ಕಳನ್ನು ನಿರಂತರ ಜೀವಂತ ಗೊಳಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕ.ಸಾ.ಪ ಮಾಜಿ ಅಧ್ಯಕ್ಷ ಚಂದ್ರ ಶೇಖರ್, ನಿಕಟ ಪೂರ್ವ ಅಧ್ಯಕ್ಷ ವೈ. ಡಿ. ರಾಜಣ್ಣ ಮಾತನಾಡಿದರು.
ಪ್ರಶಸ್ತಿ ಪ್ರಧಾನ : 2024ರ ಅಮೋಘ ವರ್ಷ ಅಮೃತ ವರ್ಷಿಣಿ ಪ್ರಶಸ್ತಿಯನ್ನು ಹಾಸನದ ಹಾಸನಾಂಬ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯೆದ್ಯಕೀಯ ನಿರ್ದೇಶಕ ಡಾ. ಬಸವರಾಜು. ಜಿ. ಎನ್. ಹಾಗೂ ಮೈಸೂರು ಮಹಾರಾಜಾ ಕಾಲೇಜಿನ ಜಾನಪದ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ವಿಜಯ ಲಕ್ಷ್ಮಿ. ಮ. ನಾ. ಪುರ. ವರಿಗೆ ನೀಡಿ ಅಭಿನಂದಿಸಲಾಯಿತು. ಜೊತೆಗೆ ಅಂಗವಿಕಲ ವಿದ್ಯಾರ್ಥಿ ಅನುಶ್ರೀ ಗೆ ಪೀಠೋಪಕರಣ ವಿತರಿಸಲಾಯಿತು.

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಶಾಲಾ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು .
ಈ ಸಂದರ್ಭದಲ್ಲಿ ಬೆಟ್ಟದಪುರ ಗ್ರಾಮ ಪಂಚಾಂಯ್ತಿ ಅಧ್ಯಕ್ಷ ಗಿರೀಶ್ , ಸಿ ಡಿ ಸಿ ಸದಸ್ಯ ಕುಂಜಪ್ಪ ಕಾರ್ನಾಡ್,ಕಿತ್ತೂರು ಅಣ್ಣಯ್ಯ ಶೆಟ್ಟಿ, ಉಪ ಪ್ರಾಂಶುಪಾಲ ಮಂಜೇಗೌಡ, ಶಿಕ್ಷಣ ತಜ್ಞ ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್,ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ನಾಗಶೆಟ್ಟಿ, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪರಮಶಿವಯ್ಯ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನವೀನ್ ಕುಮಾರ್, ಗೌರವ ಕಾರ್ಯ ದರ್ಶಿ ಆಲನಹಳ್ಳಿ ಕೆಂಪರಾಜು, ಸಾಹಿತಿ ಅಂಬಲಾರೆ ಬಸವೇಗೌಡ, ಗೊರಳ್ಳಿ ಜಗದೀಶ್, ಶಿಕ್ಷಕರಾದ ನಿಂಗರಾಜ್, ಅಮಿತಾ ಸೋಮಯ್ಯ, ಮೋಹನ್ ಕುಮಾರ್, ರೂಪಾ ಕುಮಾರಿ, ಮಮತಾ, ಜ್ಯೋತಿ ಬಿ ಎನ್, ಜ್ಯೋತಿ ಜಿ ಎನ್, ಕಾಂತರಾಜ್, ಕಾವ್ಯಶ್ರೀಎ. ಸಿ. ಕಾವ್ಯಶ್ರೀ , ಅವಿನಾಶ್, ಗಿರಿಜಾಮಣಿ , ಇಂದ್ರಮ್ಮ, ಮಹೇಶ್ವರಿ, ರಾಘವೇಂದ್ರ, ಅಲ್ಸಾ ನಯನ್ ಮಕ್ಕಳು ಇದ್ದರು.