ಚಾಮರಾಜನಗರ: ಕೇಂದ್ರ ಸರ್ಕಾರದ ಅಮೃತ್ ಭಾರತ ಸ್ಟೇಷನ್ ಸ್ಕೀಮ್ ಯೋಜನೆ ಅಡಿಯಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗದ 15 ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಅದರಲ್ಲಿ ಚಾಮರಾಜನಗರವನ್ನು ಆಯ್ಕೆ ಮಾಡಿರುವ ರೈಲ್ವೆ ಇಲಾಖೆಗೆ, ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದೀ ಅಭಿನಂದಿಸಿದ್ದಾರೆ.
ಕರ್ನಾಟಕದ ಗಡಿ ಭಾಗವಾಗಿರುವ ಚಾಮರಾಜನಗರ ಅತ್ಯುತ್ತಮ ರೈಲ್ವೆ ನಿಲ್ದಾಣವನ್ನು ಹೊಂದಿದ್ದು , ಮತ್ತಷ್ಟು ಸುಸಜ್ಜಿತ ರೈಲ್ವೆ ನಿಲ್ದಾಣಕ್ಕೆ ಆಯ್ಕೆಯಾಗಿರುವುದು ಅದರಲ್ಲೂ ಸ್ವಾತಂತ್ರ್ಯ ಸಂಗ್ರಾಮದ ನೆನಪಿನ ಅಮೃತ್ ಭಾರತ್ ಯೋಜನೆ ಅಡಿಯಲ್ಲಿ ಚಾಮರಾಜನಗರವನ್ನು ಆಯ್ಕೆ ಮಾಡಿ ಅಭಿವೃದ್ಧಿಗೆ ನಿರ್ಧಾರ ಮಾಡಿರುವುದು ಸ್ವಾಗತಾರ್ಹವಾದದ್ದು. ಚಾಮರಾಜನಗರದಿಂದ ಬೆಂಗಳೂರಿಗೆ ಮತ್ತಷ್ಟು ವಿಶೇಷ ರೈಲುಗಳನ್ನು ಪ್ರಾರಂಭಿಸಬೇಕು. ಸ್ವಾತಂತ್ರ್ಯ ಚಳುವಳಿಯನ್ನು ನೆನಪಿಸುವ ಮತ್ತು ತ್ಯಾಗ ಬಲಿದಾನ ಮಾಡಿದ ಮಹನೀಯರುಗಳ ಇತಿಹಾಸವನ್ನು ಒಳಗೊಂಡಂತೆ ಮಾಹಿತಿ ಕೇಂದ್ರವನ್ನು ಆರಂಭಿಸಬೇಕು. ರೈಲ್ವೆ ವಸ್ತು ಸಂಗ್ರಹಾಲಯ ನಿರ್ಮಾಣವಾಗಿ ಪೂರ್ಣ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡುತ್ತ ರೈಲ್ವೆ ಇಲಾಖೆಗೆ ಚಾಮರಾಜನಗರ ಜನತೆಯ ಪರವಾಗಿ ಧನ್ಯವಾದಗಳನ್ನು ಶರಣ್ಯ ಋಗ್ವೇದಿ ಅಭಿನಂದಿಸಿದ್ದಾರೆ.