Friday, April 11, 2025
Google search engine

Homeಸ್ಥಳೀಯ‘ಅಮೃತ್ ಭಾರತ್ ಸ್ಟೇಷನ್’ಯೋಜನೆ: ನಿಲ್ದಾಣಗಳ ಅಭಿವೃದ್ಧಿ ಕುರಿತು ಶಿಲ್ಪಿ ಅಗರ್ವಾಲ್ ನಾಳೆ ಪತ್ರಿಕಾಗೋಷ್ಠಿ

‘ಅಮೃತ್ ಭಾರತ್ ಸ್ಟೇಷನ್’ಯೋಜನೆ: ನಿಲ್ದಾಣಗಳ ಅಭಿವೃದ್ಧಿ ಕುರಿತು ಶಿಲ್ಪಿ ಅಗರ್ವಾಲ್ ನಾಳೆ ಪತ್ರಿಕಾಗೋಷ್ಠಿ

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಮೈಸೂರು ವಿಭಾಗದ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿಯಲ್ಲಿ ನಿಲ್ದಾಣಗಳ ಅಭಿವೃದ್ಧಿ ಕುರಿತು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸುತ್ತಾರೆ. ಪತ್ರಿಕಾಗೋಷ್ಠಿಯು 4 ಆಗಸ್ಟ್ 2023 ರಂದು 11:30 ಗಂಟೆಗೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿದೆ.

ಮೈಸೂರು:‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯು ದೇಶಾದ್ಯಂತ ರೈಲು ನಿಲ್ದಾಣಗಳಲ್ಲಿ ಇರುವ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲು ಹಾಗು ನವೀಕರಿಸಲು ಭಾರತೀಯ ರೈಲ್ವೆ ಕೈಗೊಂಡ ಮಹತ್ವಾಕಾಂಕ್ಷೆಯ ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ, ಮೈಸೂರು ವಿಭಾಗವು ಪ್ರಯಾಣಿಕರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಮತ್ತು ಅವರಿಗೆ ಉತ್ತಮ ಪ್ರಯಾಣದ ಅನುಭವಗಳನ್ನು ಒದಗಿಸಲು ವಿಭಾಗದಲ್ಲಿನ 15 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಗುರುತಿಸಿದೆ. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಮೈಸೂರು ವಿಭಾಗದ ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿಯಲ್ಲಿ ನಿಲ್ದಾಣಗಳ ಅಭಿವೃದ್ಧಿ ಕುರಿತು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸುತ್ತಾರೆ. ಪತ್ರಿಕಾಗೋಷ್ಠಿಯು 4 ಆಗಸ್ಟ್ 2023 ರಂದು 11:30 ಗಂಟೆಗೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಛೇರಿಯಲ್ಲಿರುವ ಸಭಾಂಗಣದಲ್ಲಿ ನಡೆಯಲಿದೆ.

6ನೇ ಆಗಸ್ಟ್ 2023 ರಂದು, ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ರವರು ‘ಅಮೃತ್ ಭಾರತ್ ಸ್ಟೇಷನ್’ ಯೋಜನೆಯಡಿಯಲ್ಲಿ ಅರಸೀಕೆರೆ ಮತ್ತು ಹರಿಹರ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಶಂಕುಸ್ಥಾಪನೆ ಮಾಡಲಿದ್ದಾರೆ. ಇದು ಯೋಜನೆಯ ಮಹತ್ವವನ್ನು ಮತ್ತು ಈ ಪ್ರದೇಶದಲ್ಲಿನ ರೈಲ್ವೆ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಯೋಜನೆಯ ಉದ್ದೇಶವನ್ನು ಎತ್ತಿ ತೋರಿಸುತ್ತದೆ.

ಶ್ರೀಮತಿ ಶಿಲ್ಪಿ ಅಗರ್ವಾಲ್ ರವರು ಅಭಿವೃದ್ಧಿಗಾಗಿ ಆಯ್ಕೆ ಮಾಡಲಾದ ನಿಲ್ದಾಣಗಳು, ಪ್ರತಿ ನಿಲ್ದಾಣಕ್ಕೆ ಯೋಜಿಸಲಾದ ಪ್ರಮುಖ ವೈಶಿಷ್ಟ್ಯಗಳು ಮತ್ತು ಸುಧಾರಣೆಗಳ ಕುರಿತು ಒಳನೋಟಗಳನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಿದ್ದಾರೆ. ಈ ಸಂಭಾಷಣೆಯು ಯೋಜನೆಯಲ್ಲಿ ಮುಂಬರುವ ಬೆಳವಣಿಗೆಗಳ ವಿಶೇಷ ಮುನ್ನೋಟವನ್ನು ನೀಡಲು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಪತ್ರಿಕೆಗಳಿಗೆ ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ. ಹಾಗು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವುದರ ಬಗ್ಗೆ ಮತ್ತು ನಿಲ್ದಾಣಗಳಲ್ಲಿ ಅಗತ್ಯವಿರುವ ಹೆಚ್ಚುವರಿ ಸೌಲಭ್ಯಗಳ ಬಗ್ಗೆ ಮಾಧ್ಯಮದವರು ಸಹ ಸಲಹೆಗಳನ್ನು ಸೂಚಿಸಬಹುದಾಗಿದೆ.

‘ಅಮೃತ್ ಭಾರತ್ ಸ್ಟೇಷನ್’ಯೋಜನೆ: 6ನೇ ಆಗಸ್ಟ್ 2023 ರಂದು ನರೇಂದ್ರ ಮೋದಿ ‘ವಿಡಿಯೋ ಕಾನ್ಫರೆನ್ಸಿಂಗ್’ ಮೂಲಕ ಶಂಕುಸ್ಥಾಪನೆ

RELATED ARTICLES
- Advertisment -
Google search engine

Most Popular