Friday, April 18, 2025
Google search engine

Homeರಾಜ್ಯಸುದ್ದಿಜಾಲಕ್ರಿಯಾಶೀಲ ಮತ್ತು ಅಭಿವೃದ್ದಿ ಪರವಾದ ರಾಜಕಾರಣಿ ಎಸ್.ಎಂ.ಕೃಷ್ಣ ಅವರದು ಮಾದರಿ ವ್ಯಕ್ತಿತ್ವ-ದೊಡ್ಡಸ್ವಾಮೇಗೌಡ

ಕ್ರಿಯಾಶೀಲ ಮತ್ತು ಅಭಿವೃದ್ದಿ ಪರವಾದ ರಾಜಕಾರಣಿ ಎಸ್.ಎಂ.ಕೃಷ್ಣ ಅವರದು ಮಾದರಿ ವ್ಯಕ್ತಿತ್ವ-ದೊಡ್ಡಸ್ವಾಮೇಗೌಡ

  • ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ದೇಶದ ಅತ್ಯಂತ ಕ್ರಿಯಾಶೀಲ ಮತ್ತು ಅಭಿವೃದ್ದಿ ಪರವಾದ ರಾಜಕಾರಣಿಯಾಗಿದ್ದ ಜನನಾಯಕ ಎಸ್.ಎಂ.ಕೃಷ್ಣ ಅವರದು ಮಾದರಿ ವ್ಯಕ್ತಿತ್ವ ಎಂದು ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.

ಪಟ್ಟಣದ ಮುಳ್ಳೂರು ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಶ್ರದ್ದಾಂಜಲಿ ಸಭೆಯಲ್ಲಿ ಮಾತನಾಡಿದ ಅವರು ಬೆಂಗಳೂರು ನಗರ ಜಗತ್ತಿನಲ್ಲಿಯೇ ಖ್ಯಾತಿಯಾಗಲು ಅವರ ದೂರದೃಷ್ಠಿ ಕಾರಣ ಎಂದರು.

ತಮ್ಮ ಅಭಿವೃದ್ದಿ ಮತ್ತು ಜನಪರವಾದ ಆಡಳಿತ ವೈಖರಿಯಿಂದ ಇತರರಿಗೆ ಮಾದರಿಯಾಗಿದ್ದ ಅವರು ರಾಜಕೀಯವಾಗಿ ಪರಮೋಚ್ಚ ಸ್ಥಾನಕ್ಕೆ ಏರಿದರು ಅತ್ಯಂತ ಸರಳರಾಗಿ ಬಡವರು, ದಲಿತರು ಹಾಗೂ
ಹಿಂದುಳಿದ ವರ್ಗದ ಜನರಿಗೆ ಮಿಡಿದ ಮಾನವೀಯ ಗುಣವುಳ್ಳ ಮನುಷ್ಯರಾಗಿದ್ದರೆಂದು ಪ್ರಶಂಸಿಸಿದರು.

ತಮ್ಮ ಅಧಿಕಾರದ ಅವಧಿಯಲ್ಲಿ ಹತ್ತು ಹಲವಾರು ಜನಪರ ಕಾರ್ಯಗಳನ್ನು ಜಾರಿಗೆ ತಂದ ಅವರು
ಅವುಗಳನ್ನು ಅನುಷ್ಠಾನ ಮಾಡಿ ಜನ ಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸಿದ ಛಲದಂಕ ಮಲ್ಲ ಗುಣಗಾನ
ಮಾಡಿದರು.

ಪ್ರಪಂಚದ ಎಲ್ಲಾ ಮೂಲೆಗಳಿಂದ ಭಾರತ ದೇಶಕ್ಕೆ ಬರುತ್ತಿದ್ದ ರಾಜಕೀಯ ನಾಯಕರು, ಚುನಾಯಿತ ಜನ ಪ್ರತಿನಿಧಿಗಳು ಮತ್ತು ಉಧ್ಯಮಿಗಳು ಬಂದರೆ ಅವರು ಬೆಂಗಳೂರು ನಗರಕ್ಕೆ ಒಮ್ಮೆ ಬೇಟಿ ನೀಡುವಂತೆ ಮಾಡಿದ ಮಾಜಿ ಮುಖ್ಯಮಂತ್ರಿಗಳ ಸಾಧನೆ ಬಣ್ಣಿಸಲು ಅಸಾಧ್ಯ ಎಂದು ನುಡಿದರು.

ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯಮಹದೇವಸ್ವಾಮಿ ಮಾತನಾಡಿ ಮುಖ್ಯಮಂತ್ರಿಗಳಾಗಿದ್ದಾಗ ಬಿಸಿಯೂಟ, ಯಶಸ್ವಿನಿ, ಸ್ತ್ರೀ-ಶಕ್ತಿ ಸ್ವಸಹಾಯ ಸಂಘ ರಚನೆ ಸೇರಿದಂತೆ ಇತರ ಜನಪ್ರಿಯ ಯೋಜನೆ ಜಾರಿಗೆ ತಂದ
ಎಸ್.ಎಂ.ಕೃಷ್ಣ ಅವರು ದೇಶದ ಅಪ್ರತಿಮ ಸಾಧಕ ರಾಜಕೀಯ ನಾಯಕ ಎಂದರು.

ಚುನಾಯಿತರಾಗಿ ಸಾಂವಿದಾನಿಕವಾಗಿ ಉನ್ನತ ಸ್ಥಾನಕ್ಕೇರಿದವರು ಹೇಗೆ ನಡೆದುಕೊಳ್ಳಬೇಕು ಮತ್ತು ಯಾವ ರೀತಿ ಇರಬೇಕು ಎಂದು ಉದಾಹರಣೆ ಸಹಿತ ತಿಳಿಸಿ ಎಲ್ಲರಿಗೂ ಮೇಲ್ಪಂಕ್ತಿ ರಾಜಕಾರಣ ಮಾಡಿದ ಅಂತಹವರು ನಮ್ಮ ನಾಡಿನಲ್ಲಿ ಜನಿಸಿದ್ದು ನಾವೆಲ್ಲರ ಹೆಮ್ಮೆಪಡುವ ವಿಚಾರ ಎಂದು ಸಂತಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಕೊಳ್ಳೇಗಾಲ ಕ್ಷೇತ್ರದ ಮಾಜಿ ಶಾಸಕ ಎಸ್.ಜಯಣ್ಣ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.

ಜಿ.ಪಂ.ಸದಸ್ಯರಾದ ಜಿ.ಆರ್.ರಾಮೇಗೌಡ, ಜಯರಾಮೇಗೌಡ, ತಾ.ಪಂ.ಮಾಜಿ ಅಧ್ಯಕ್ಷ ಹೆಬ್ಬಾಳುನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಹದೇವ್, ಉದಯಶಂಕರ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ತಾಲೂಕು ಕಾಂಗ್ರೆಸ್ ಸೇವಾ ದಳದ ಅಧ್ಯಕ್ಷ ಬಿ.ಹೆಚ್.ಕುಮಾರ್, ವಕ್ತಾರ ಸೈಯದ್ ಜಾಬೀರ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ನಿರ್ದೇಶಕ ಕೆ.ಎನ್.ಬುಡೀಗೌಡ, ಕೆ.ಎಂ.ಶ್ರೀನಿವಾಸ್, ಪುರಸಭೆ ಮಾಜಿ ಅಧ್ಯಕ್ಷ ನರಸಿಂಹರಾಜು, ಸದಸ್ಯರಾದ ಶಂಕರ್, ನಟರಾಜು, ಮಾಜಿ ಸದಸ್ಯರಾದ ಕೆ.ಎಲ್.ರಾಜೇಶ್, ಅಸ್ಲಾಂ, ಕಾಂಗ್ರೆಸ್ ಮುಖಂಡರಾದ ಹರಿರಾಜು, ನಂದಿ, ಪುಟ್ಟು, ಗಿರೀಶ್, ಗಂಗಾಧರ್, ಗಣಪತಿರವಿ, ಮಂಜುನಾಥ್ ಸೇರಿದoತೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.

RELATED ARTICLES
- Advertisment -
Google search engine

Most Popular