Friday, April 4, 2025
Google search engine

Homeಸಿನಿಮಾಸಿನಿಮಾ ಸಕ್ಸಸ್ ಗೆ ಮಸಿ ಬಳಿಯುವ ಯತ್ನ: ನಮ್ಮ ಮೇಲೆ ಕ್ರಮ ಆದ್ರೆ ಕಾನೂನು ಹೋರಾಟ-ರಾಕ್...

ಸಿನಿಮಾ ಸಕ್ಸಸ್ ಗೆ ಮಸಿ ಬಳಿಯುವ ಯತ್ನ: ನಮ್ಮ ಮೇಲೆ ಕ್ರಮ ಆದ್ರೆ ಕಾನೂನು ಹೋರಾಟ-ರಾಕ್ ಲೈನ್ ವೆಂಕಟೇಶ್ ಕಿಡಿ

ಬೆಂಗಳೂರು: ತಡರಾತ್ರಿವರೆಗೆ ಪಾರ್ಟಿ ನಡೆಸಿದ ಆರೋಪದ ಮೇಲೆ ನಟ ದರ್ಶನ್ ಸೇರಿ ಇತರೆ ಕಲಾವಿದರಿಗೆ ನೋಟಿಸ್ ನೀಡಿ ಇಂದು ವಿಚಾರಣೆ ನಡೆಸಲಾಗಿದ್ದು, ಈ ಸಂಬಂಧ ಪ್ರತಿಕ್ರಿಯಿಸಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕಾಟೇರಾ ಸಕ್ಸಸ್ ಗೆ ಮಸಿ ಬಳಿಯುವ ಯತ್ನವಿದು ಇದರ ಹಿಂದೆ ಯಾರಿದ್ದಾರೆ ಅಂತಾ ಗೊತ್ತಿದೆ ಎಂದು ಕಿಡಿಕಾರಿದರು.
ಇಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿ ವಾಪಸ್ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ‘ಕಾಟೇರ’ ಸಿನಿಮಾ ಯಶಸ್ಸು ಕಂಡಿರುವುದಕ್ಕೆ ಈ ರೀತಿ ದರ್ಶನ್ ಅವರನ್ನು ಟಾರ್ಗೆಟ್ ಮಾಡಿ ಮಸಿ ಬಳಿಯುವ ಯತ್ನ ನಡೆದಿದೆ. ಪೊಲೀಸ್ ಕೇಸ್ ಹಿಂದೆ ಷಡ್ಯಂತ್ರ ಇದೆ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿದೆ. ದರ್ಶನ್ ರನ್ನ ಯಾಕೆ ಟಾರ್ಗೆಟ್ ಮಾಡಬೇಕು. ದರ್ಶನ್ ಹೆಸರಿಗೆ ಭಂಗ ಮಾಡೋದನ್ನ ಒಪ್ಪಲ್ಲ. ನಾನಲ್ಲ ಇಡೀ ಚಿತ್ರರಂಗವೇ ಇದನ್ನ ಖಂಡಿಸುತ್ತೆ. ನಾವು ಫೈಟ್ ಮಾಡೋ ಜನ ಅಲ್ಲ ಕಾನೂನು ಇದೆ. ನಮ್ಮ ಮೇಲೆ ಕ್ರಮ ಆದರೇ ಕಾನೂನು ಹೋರಾಟ ಮಾಡುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular