ಮೈಸೂರು: ಮೈಸೂರಿನ ಮರುಳೇಶ್ವರ ಸೇವಾಭವನದಲ್ಲಿ ಪಾರ್ಶ್ವವಾಯು ಕುರಿತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಮೈಸೂರಿನ ಖ್ಯಾತ ನರರೋಗಶಾಸ್ತ್ರಜ್ಞರಾದ ಶ್ರೀಯುತ ಡಾ. ಸುಶ್ರುತ್ ಗೌಡ ರವರ ನೇತೃತ್ವದಲ್ಲಿ ಶಾಂತವೇರಿ ಗೋಪಾಲಗೌಡ ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡ ವಿಶೇಷ ಶಿಬಿರವನ್ನು ಏರ್ಪಡಿಸುವುದರ ಮೂಲಕ ಮಹಿಳೆಯರಿಗೆ ಆರೋಗ್ಯ ತಪಾಸಣೆ ನಡೆಸಿತು.
ಈ ಸಂದರ್ಭದಲ್ಲಿ ಡಾ. ಸುಶ್ರುತ್ ಗೌಡ ರವರು ಮಾತನಾಡಿ ಪಾರ್ಶ್ವವಾಯು ಏಕೆ ಸಂಭವಿಸುತ್ತದೆ, ಅದರ ವಿಧಗಳು, ಲಕ್ಷಣಗಳು , ತಡಗಟ್ಟುವಿಕೆ, ಹೀಗೆ ಅದರ ಬಗ್ಗೆ ವಿಷಯಗಳನ್ನು ವಿವರವಾಗಿ ತಿಳಿಸಿದರು. ಅದರಲ್ಲು ಮುಖ್ಯವಾಗಿ ಇಂದಿನ ನಮ್ಮ ಬದಲಾದ ಜೀವನ ಶೈಲಿಯಿಂದಾಗಿ ಏರುಪೇರಾಗುತ್ತಿರುವ ಬಿ.ಪಿ ಯನ್ನು ಹತೋಟಿಯಲ್ಲಿಟ್ಟುಕೂಂಡು , ಆರೋಗ್ಯಕರ ಜೀವನಕ್ಕಾಗಿ ದಿನಂಪ್ರತಿ ವ್ಯಾಯಾಮ ಮಾಡುತ್ತಾ ಆಹಾರ ಶೈಲಿಯನ್ನು ದೇಹಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿಕೊಂಡು , ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಸ್ತುಬದ್ದ ಜೀವನ ನಡೆಸುವುದರ ಮೂಲಕ ಉತ್ತಮ ಆರೋಗ್ಯ ಹೊಂದಿ ಪಾರ್ಶ್ವವಾಯು ಬರದಂತೆ ತಡಗಟ್ಟಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಜೆ ಶೋಭ ರಮೇಶ್ ರವರು ವಹಿಸಿದ್ದರು. ಪದಾಧಿಕಾರಿಗಳು ಹಾಗು ಸಂಘದ ಎಂಬತಕ್ಕು ಹೆಚ್ಚು ಸದಸ್ಯರುಗಳು ಹಾಜರಿದ್ದು ಕಾರ್ಯಕ್ರಮದ ಪ್ರಯೋಜನೆ ಪಡೆದುಕೊಂಡರು.