Saturday, April 19, 2025
Google search engine

Homeಅಪರಾಧವೇಟ್‌ ಲಿಫ್ಟಿಂಗ್ ರಾಡ್‌’ಗೆ ನೇಣು ಬಿಗಿದುಕೊಂಡು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ವೇಟ್‌ ಲಿಫ್ಟಿಂಗ್ ರಾಡ್‌’ಗೆ ನೇಣು ಬಿಗಿದುಕೊಂಡು ಐಐಟಿ ವಿದ್ಯಾರ್ಥಿ ಆತ್ಮಹತ್ಯೆ

ನವದೆಹಲಿ: ಐಐಟಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲೇ ವೇಟ್‌ ಲಿಫ್ಟಿಂಗ್ ರಾಡ್‌ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಯನ್ನು ಪನವ್ ಜೈನ್ (23) ಎಂದು ಹೇಳಲಾಗಿದ್ದು, ಮಂಗಳವಾರ ಸಂಜೆ ತಂದೆ ತಾಯಿ ವಾಕಿಂಗ್ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೇಟ್‌ ಲಿಫ್ಟಿಂಗ್ ರಾಡ್‌ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾತ್ರಿ ಸುಮಾರು 9 ಗಂಟೆಯ ವೇಳೆ ಪೋಷಕರು ಮನೆಗೆ ಬಂದಾಗ ಮಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಕೂಡಲೇ ಮಗನನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟೋತ್ತಿಗಾಗಲೇ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು ಎಂದು ವೈದ್ಯರು ಹೇಳಿದ್ದಾರೆ.

ಪನವ್ ಜೈನ್ ನಾಲ್ಕನೇ ವರ್ಷದ ಬಿ ಟೆಕ್ ವಿದ್ಯಾರ್ಥಿಯಾಗಿದ್ದು, ಪಣವ್ ಅವರ ತಂದೆಯ ಹೇಳಿಕೆಯಂತೆ ತನ್ನ ಮಗ ಕಳೆದ ಕೆಲವು ತಿಂಗಳುಗಳಿಂದ ಒತ್ತಡ ಮತ್ತು ಖಿನ್ನತೆಯಿಂದ ಬಳಲುತ್ತಿದ್ದ ಅಲ್ಲದೆ ಚಿಕಿತ್ಸೆಯನ್ನು ಪಡೆಯುತ್ತಿದ್ದ ಎಂದು ಹೇಳಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular