Sunday, April 20, 2025
Google search engine

Homeಅಪರಾಧಅಮೆರಿಕದಲ್ಲಿ ಭಾರತ ಮೂಲದ ಟೆಕ್ಕಿ ಸಾವು

ಅಮೆರಿಕದಲ್ಲಿ ಭಾರತ ಮೂಲದ ಟೆಕ್ಕಿ ಸಾವು

ವಾಷಿಂಗ್ಟನ್: ಅಮೆರಿಕದ ರಾಜಧಾನಿಯ ರೆಸ್ಟೋರೆಂಟ್ ನ ಹೊರಗೆ ಮಾರಣಾಂತಿಕ ಹಲ್ಲೆಗೀಡಾದ ಭಾರತೀಯ ಮೂಲದ ೪೧ ವರ್ಷದ ಐಟಿ ಎಂಜಿನಿಯರ್ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಇದು ಕಳೆದ ಎರಡು ತಿಂಗಳಲ್ಲಿ ಭಾರತ ಅಥವಾ ಭಾರತೀಯ ಮೂಲದ ಅಮೆರಿಕನ್ ಪ್ರಜೆಗಳು ದಾಳಿಯಿಂದ ಮೃತಪಟ್ಟ ಏಳನೇ ಪ್ರಕರಣವಾಗಿದೆ.

ತಡರಾತ್ರಿ ೨ ಗಂಟೆ ಸುಮಾರಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂತ್ರಸ್ತ ಟೆಕ್ಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವುದನ್ನು ಗಮನಿಸಿದ್ದಾರೆ. ತೀವ್ರ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವಿವೇಕ್ ತನೇಜಾ ಅವರನ್ನು ಟ್ರಾಮಾ ಸೆಂಟರ್ ಗೆ ಕರೆದೊಯ್ಯಲಾಗಿತ್ತು. ಫೆಬ್ರವರಿ ೭ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮೆಟ್ರೋಪಾಲಿಟನ್ ಪೊಲೀಸ್ ವಿಭಾಗ ಹೇಳಿಕೆ ನೀಡಿದೆ.

RELATED ARTICLES
- Advertisment -
Google search engine

Most Popular